ಹುಕ್ಕೇರಿ 26: ತಾಲೂಕಿನ ಶಿರಗಾಂವ ಗ್ರಾಮ ದಲ್ಲಿ ನ್ಯಾಯಬೆಲೆ 2ರ ಅಂಗಡಿಯಲ್ಲಿ ಬಡವರ ಅಕ್ಕಿಗೆ ಕನ್ನಾ ಹಾಕುತ್ತಿರುವ ಪಿ.ಕೆ.ಪಿ.ಎಸ್. ಹಾಗೂ ವ್ಹಿ ಎಸ್ ಎಸ್ ಸಂಸ್ಥೆಯ ಆಧೀನದಲ್ಲಿ ಶಿರಗಾಂವ ಗ್ರಾಮದ ಪ್ರಾರ್ಥಮಿಕ ಕೃಷಿ ಪತ್ತಿನ ಸೊಸೈಟಿ ಹಾಗೂ ವ್ಹಿ ಎಸ್ ಎಸ್ ಸಂಸ್ಥೆಯ ಆಧೀನದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬಡ ಕುಟುಂಬಗಳ ಪಡಿತರಕ್ಕೆ ಕನ್ನ ಹಾಕುತ್ತಿರುವ ಈ ನ್ಯಾಯಬೆಲೆ ಅಂಗಡಿ ಪಿ. ಕೆ. ಪಿ. ಎಸ್.ಹಾಗೂ ವ್ಹಿ ಎಸ್ ಎಸ್ ಸಂಸ್ಥೆಯ ಆಧೀನದಲ್ಲಿ ಇರುತ್ತದೆ. ನ್ಯಾಯಬೆಲೆ ಅಂಗಡಿಯಲ್ಲಿ ಸರಕಾರ ಬಡವರಿಗೆ ನೀಡುವ ಅಕ್ಕಿಗೆ ಕನ್ನ ಹಾಕುವ ಮೂಲಕ ಬಡವರಿಗೆ ನೀಡುವ ಅಕ್ಕಿಯಲ್ಲಿ ಪ್ರತೀ ಪಡಿತರ ಚೀಟಿದಾರ ರಿಂದ 1ಕೆ.ಜಿ. ಅಥವಾ 2 ಕೆ.ಜಿ. ಅಕ್ಕಿಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದಾಗ ಅಲ್ಲಿಗೆ ವರದಿಗಾರರು ಹೋದ ಸಂದರ್ಭದಲ್ಲಿ ರಾಜಾರೋಷವಾಗಿ 10 ಕೆಜಿ ಲೂಟಿ ಮಾಡಿದ್ದು ಕಂಡು ಬಂದಿದೆ. ಶಿರಗಾಂವ ಪಿಕೆಪಿಎಸ್ 2ರಲ್ಲಿ 1.ಕೆ.ಜಿ ಪಡಿತರ ಅಕ್ಕಿಯನ್ನು ಕಡಿಮೆ ಕೊಡುತ್ತೇವೆ ಎಂದು ಸೆಕ್ರೆಟರಿ ರಾಜಾರೋಷಾವಾಗಿ ಹೇಳುತ್ತಾರೆ ಎಪಿಎಂಸಿಯಿಂದ ಬರಬೇಕಾದರೆ ದಾರಿಯಲ್ಲಿ ಬಿದ್ದು ಹೋಗುತ್ತೆ ಕೆಳಕ್ಕೆ ಬಿದ್ದು ನಾಸಾಗಿರುವ ಅಕ್ಕಿ ಜನಗಳಿಗೆ ಕಮ್ಮಿ ಬೀಳುತ್ತೆ ಅದಕ್ಕೆ ಜನರಿಗೆ 1ಕೆ. ಜಿ. ಕಡಿಮೆ ಕೊಡುತ್ತೇನೆ ಎಂದು ಹೇಳುತ್ತಾರೆ.
ಈ ನ್ಯಾಯಬೆಲೆ ಅಂಗಡಿಗೆ ಆ ಊರಿನಲ್ಲಿ ಒಂದು ಕಾಡಿಗೆ 1, ಅಥವಾ2 ಕೆ.ಜಿ ಹೊಡೆಯುತ್ತಾನೆ ಸರಾಸರಿ ಇವನ ಬಳಿ ಉಳಿಯುವ ಅಕ್ಕಿ ಎಲ್ಲಿ ಹೋಗುತ್ತೆ. ಇವರಿಗೆ ಬೆನ್ನು ಎಲುವಾಗಿ ಕಾನದ ಕೈಯಗಳು ಇದೆಯಾ ಅಥವಾ ಅಧಿಕಾರಿಗಳ ಅಭಯ ಹಸ್ತ ಇದೆಯಾ ಎಂಬುದು ತಿಳಿದು ಬಂದಿಲ್ಲಾ .1.ಅಥವಾ2 ಕೆಜಿ ಕದಿಯುತ್ತಿರುವ ಈ ಕತರ್ನಾಕ್ ಕಳ್ಳನ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರಾ ಅಥವಾ ಇವರು ಕೊಡು ಇವರ ಜೊತೆ ಶಾಮಿಲ್ ಆಗಿದಾರಾ ಎಂಬುವದನ್ನು ಕಾದು ನೋಡಬೇಕು ಬಡ ಕುಟುಂಬಗಳಿಗೆ ನ್ಯಾಯವದಗಿಸುತ್ತಾರಾ ಜೋತೆಗೂಡಿ ಮೋಸ ಮಾಡುತ್ತಾರಾ ಎಂಬುದನ್ನು ಕಾದು ನೋಡೋಣ ಸ್ಥಳಕ್ಕೆ ಆಗಮಿಸಿದ ಆಹಾರ ನಿರಿಕ್ಷಣಾ ಅಧಿಕಾರಿ ಸಾಗರ ಅವರು ಯಾವ ರೀತಿ ಕ್ರಮ ಜರಗಿಸುತ್ತಾರೆ ಎಂಬುವದನ್ನು. ಕಾದು ನೋಡಾನಾ.