ಕುರಿಗಾಹಿ ಕುಟುಂಬಕ್ಕೆ 4 ಲಕ್ಷ ಪಹಿಹಾರ ಚೆಕ್ ಶಾಸಕ ವಿತರಣೆ

MLA distributes Rs 4 lakh pahihara cheque to shepherd family

ಕುರಿಗಾಹಿ ಕುಟುಂಬಕ್ಕೆ 4 ಲಕ್ಷ ಪಹಿಹಾರ ಚೆಕ್ ಶಾಸಕ ವಿತರಣೆ

ಶಿಗ್ಗಾವಿ 26  : ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿತಕ್ಕೆ ಸಾವನ್ನಪ್ಪಿದ ಕುರಿಗಾಹಿ ದಿ.ಮಾಳಪ್ಪ ಸೋಮಣ್ಣ ಗಡ್ಡೆ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ 4 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ನ್ನು ಶಾಸಕ ಯಾಸೀರ ಅಹ್ಮದಖಾನ ಪಠಾಣ ವಿತರಣೆ ಮಾಡಿದರು.ನಂತರ ಮಾತನಾಡಿದ ಅವರು ಈ ವೇಳೆ ಗಾಯಗೊಂಡ ಆಕಾಶ ಮಾಳಪ್ಪ ಗಡ್ಡೆ ಅವರ ಆರೋಗ್ಯ ವಿಚಾರಿಸಿ ಚಿಕಿತ್ಸೆಯ ವೆಚ್ಚ ಸರ್ಕಾರದಿಂದ ಭರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ರವಿ ಕೊರವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.