ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ಸ್ಥಾನ ಪಡೆದ ಡಾ.ಇಶಿಕಾ ಸಿಂಗ್ ಅವರಿಗೆ ಸನ್ಮಾನ ಕಾರ್ಯಕ್ರಮ
ಹುಬ್ಬಳ್ಳಿ 26: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 206ನೇ ಸ್ಥಾನ ಪಡೆದ ಡಾ.ಇಶಿಕಾ ಸಿಂಗ್ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಶಾಲು, ಗ್ರಂಥಗಳನ್ನು ನೀಡಿ, ಮಾಲಾರೆ್ಣ ಮಾಡಿ ಆತ್ಮೀಯವಾಗಿ ಹೃದಯಸ್ಪರ್ಶಿ ಪ್ರೀತಿಯಿಂದ ಗೌರವಿ ಸಲಾಯಿತು. ಸತತ ಅಧ್ಯಯನ ತಾಳ್ಮೆ ಸಂಯಮ ದೃಡ ಸಂಕಲ್ಪ, ಆತ್ಮ ವಿಶ್ವಾಸ, ತಂದೆ-ತಾಯಿ, ಗುರು ಹಿರಿಯರ ಆಶೀರ್ವಾದವೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಕಾರಣ ಎಂದು ಕೇಂದ್ರ ಲೋಕಸೇವಾ ಆಯೋಗವು 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲೇ ರಾಷ್ಟ್ರ ಮಟ್ಟದಲ್ಲಿ 206ನೇ ಸ್ಥಾನ ಗಳಿಸಿದ ಹುಬ್ಬಳ್ಳಿಯ ಹೆಮ್ಮೆಯ ಸುಪುತ್ರಿ ಅಕ್ಷಯ ಕಾಲೋನಿಯ ನಿವಾಸಿ ನಮ್ಮ ಆತ್ಮೀಯ ಸ್ನೇಹಿತರಾದ ಉದ್ಯಮಿ ರಾಜೇಶಕುಮಾರ ಸಿಂಗ್ ಅವರ ಸುಪುತ್ರಿ ಡಾ.ಇಶಿಕಾ ಸಿಂಗ್ ಅವರು ಸಮಾಧಾನ ಚಿತ್ತದಿಂದ ಮನದ ಮಾತುಗಳನ್ನು ಹೇಳಿದರು. ಕೆ ಎಂ ಸಿ ಆರ್ ಐ ನಲ್ಲಿ ಎಂಬಿಬಿಎಸ್ ಓದಿರುವ ಇಶಿಕಾ ಮೊದಲಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಳು ಮಹಾನಗರ ಪಾಲಿಕೆ ಸದಸ್ಯ ಉಮೇಶ ಕೌಜಗೇರಿ, ಸಹನಾ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ಡಾ.ಇಶಿಕಾ ತಂದೆ, ಉದ್ಯಮಿ ರಾಜೇಶಕುಮಾರ ಸಿಂಗ್, ತಾಯಿ ಕಿರಣ ಸಿಂಗ್, ಸಹೋದರ, ಎಂಬಿಬಿಎಸ್ ಓದುತ್ತಿರುವ ರಿಶಿತ್ ಸಿಂಗ್, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ನಾಗನಗೌಡ ಮುಂತಾದವರು ಇದ್ದರು.