ಬೆಳಗಾವಿ, ಫೆ.12, ಕಸದ ರಾಶಿಯಲ್ಲಿ ನಾಲ್ಕು ಕಂಟ್ರಿಮೇಡ್ ಪಿಸ್ತೂಲ್ ಗಳು ಪತ್ತೆಯಾಗಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಬಂಧವಿದೇಯಾ ? ಎಂಬುದರ ಕುರಿತುಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದಲ್ಲಿ ಸ್ಥಳೀಯರು ಸ್ಥಳ ಸ್ವಚ್ಛಗೊಳಿಸುವ ವೇಳೆಯಲ್ಲಿ ನಾಲ್ಕು ಕಂಟ್ರಿಮೇಡ್ ಪಿಸ್ತೂಲ್ ಪತ್ತೆಯಾಗಿವೆ.ಮಣ್ಣಿನಲ್ಲಿ ಹೂತಿಟ್ಟದ್ದರಿಂದ ಪಿಸ್ತೂಲ್ ಗಳು ತುಕ್ಕು ಹಿಡಿದಿವೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಪಿಸ್ತೂಲ್ ಚಲಾಯಿಸುವ ತರಬೇತಿ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನೀಡಲಾಗಿತ್ತು ಎಂದು ಎಸ್ ಐಟಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈಗ ಕಂಟ್ರಿಮೇಡ್ ಪಿಸ್ತೂಲ್ ಪತ್ತೆಯಾಗಿದ್ದರಿಂದ ಹಲವು ಅನುಮಾನ ಮೂಡಿಸಿದೆ.ಕಂಟ್ರಿಮೇಡ್ ಪಿಸ್ತೂಲ್ ಪತ್ತೆಯಾದ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.