ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನದ ಹಿನ್ನೆಲೆ ಡಿಸೆಂಬರ್‌-30ರ ನಿರ್ಮಲ ತುಂಗಭದ್ರಾ ಅಭಿಯಾನದ ಸಮಾರೋಪ ಜನೇವರಿ 08 ಕ್ಕೆ ಮುಂದೂಡಿಕೆ

Former Prime Minister Dr. In the background of Manmohan Singh's death, the conclusion of the Nirmala

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನದ ಹಿನ್ನೆಲೆ ಡಿಸೆಂಬರ್‌-30ರ ನಿರ್ಮಲ ತುಂಗಭದ್ರಾ ಅಭಿಯಾನದ ಸಮಾರೋಪ ಜನೇವರಿ 08 ಕ್ಕೆ ಮುಂದೂಡಿಕೆ 

ಗಂಗಾವತಿ 29: ನಿರ್ಮಲ ತುಂಗಭದ್ರಾ ಅಭಿಯಾನದ ಶೋಭಾಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮವನ್ನು ಡಿಸೆಂಬರ್‌-30 ಕ್ಕೆ ನಿಗದಿಯಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್‌ರವರ ನಿಧನದ ನಿಮಿತ್ಯ ಸದರಿ ಕಾರ್ಯಕ್ರಮವನ್ನು ಮುಂದಿನ ತಿಂಗಳು ಅಂದರೆ ಜನೇವರಿ-08ಕ್ಕೆ ಮುಂದೂಡಲಾಗಿದೆ ಎಂದು ಅಭಿಯಾನದ ರಾಷ್ಟ್ರೀಯ ಸಂಚಾಲಕರಾದ ಬಸವರಾಜ ಪಾಟೀಲ್ ವೀರಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಜನೇವರಿ-07 ರಂದು ಅಭಿಯಾನದ ಪಾದಯಾತ್ರೆಯು ಕೊಪ್ಪಳ ಜಿಲ್ಲೆ ಪ್ರವೇಶಿಸಲಿದ್ದು, ಜನೇವರಿ-08 ರಂದು ಗಂಗಾವತಿ ನಗರದಲ್ಲಿ ಶೋಭಾಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮ ಜರುಗಲಿದೆ. 

ಈ ಅಭಿಯಾನದ ಕುರಿತು ಮಹತ್ವದ ಪೂರ್ವಭಾವಿ ಸಭೆಯನ್ನು ಡಿಸೆಂಬರ್‌-29 ರವಿವಾರ ಸಾಯಂಕಾಲ 4:00 ಗಂಟೆಗೆ ಗಂಗಾವತಿ ನಗರದ ಐ.ಎಂ.ಎ ಭವನದಲ್ಲಿ ಕರೆಯಲಾಗಿದೆ. ಈ ಸಭೆಗೆ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ಸಮಾಜಗಳ ಹಿರಿಯ ಮುಖಂಡರು, ರೈತ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ಮಹಿಳಾ ಪ್ರತಿನಿಧಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.