ಬೆಂಗಳೂರು, ಏಪ್ರಿಲ್ 29,ನಗರದ ಹಿಂದೂಸ್ತಾನ್ ವಿಮಾನ ಕಾರ್ಖಾನೆ (ಎಚ್‌ಎಎಲ್) ಆವರಣದಲ್ಲಿ ಬುಧವಾರ ಬೆಳಿಗ್ಗೆ ಬೆಂಕಿ ಅನಾಹುತ ಘಟನೆ ವರದಿಯಾಗಿದೆ.ಅಧಿಕೃತ ಮೂಲಗಳಂತೆ, ಎಚ್‌ಎಎಲ್ ಸಂಕೀರ್ಣದ ಫೋರ್ಜ್ ಮತ್ತು ಫೌಂಡ್ರಿ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಲುಪಿದ ತಕ್ಷಣ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.ಪ್ರಾಥಮಿಕ ವರದಿಗಳಂತೆ, ದಾಸ್ತಾನು ಸಂಗ್ರಹದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೆಗ್ನೀಸಿಯಮ್ ದಾಸ್ತಾನಿಗೆ ಬೆಂಕಿ ಆವರಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರೆದಿದ್ದು, ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಘಟನೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.