ಮೂಡಲಗಿ 24: ಹುಬ್ಬಳ್ಳಿಯ ವಿಶ್ವ ಭಗೀರಥ ಟ್ರಸ್ಟ್ ಚೇರ್ಮನ ಈಶ್ವರ ಶಿರಕೊಳ ಅವರ ಮಾತೋಶ್ರೀ ಅವರ ಜನುಮದಿನದ ಶತಮಾನೋತ್ಸವ ಕಾರ್ಯಕ್ರಮ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಮಂಜುನಾಥ ಇವರನ್ನು ಗೌರವಿಸುವ ಕಾರ್ಯಕ್ರಮವನ್ನು ಜ.26ರಂದು ನಡೆಸಲಾಗುವುದು.
ಶ್ರೀನಿವಾಸ್ ಗಾರ್ಡನ್ ಕುಸುಗಲ್ ರಸ್ತೆ,ಹುಬ್ಬಳ್ಳಿಯಲ್ಲಿ ಸಂಜೆ 4 ಗಂಟೆಗೆ ರಾಜ್ಯಮಟ್ಟದ ಉಪ್ಪಾರ ವಕೀಲರ ಹಾಗೂ ಪತ್ರಕರ್ತರ ಸಮಾಲೋಚನ ಏರಿ್ಡಸಲಾಗಿದ್ದು ಸಮಾರಂಭದಲ್ಲಿ ಉಪ್ಪಾರ ಸಮಾಜದ ಬಹುದಿನಗಳ ಬೇಡಿಕೆಯಾಗಿರು ಮೀಸಲಾತಿ ಸೌಲಭ್ಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೌಲಭ್ಯಗಳು, ನಿಗಮ ಮಂಡಳಿಗಳ ನೇಮಕ, ಎಮ್.ಎಲ್.ಸಿ. ಸ್ಥಾನಮಾನ, ರಾಜ್ಯ /ಜಿಲ್ಲೆ/ ತಾಲೂಕು ಮಟ್ಟದಲ್ಲಿ ಸರ್ಕಾರದಿಂದ ನಿವೇಶನ ಗುರುತಿಸಿ ಭಗೀರಥ ಭವನಗಳ ನಿರ್ಮಾಣ ,ಹಾಗೂ ಸಮಾಜದ ಮುಖಂಡರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಬಹುದಿನಗಳಿಂದ ಹೋರಾಟ ಮಾಡುತ್ತ ಬಂದರೂ ಯಾವುದೇ ನ್ಯಾಯ ದೊರೆತಿಲ್ಲ. ಈ ಎಲ್ಲ ಬೇಡಿಕೆಗಳಿಗೆ ಮತ್ತು ಹೋರಾಟಗಳಿಗೆ ಒಂದು ಕಾನೂನು ಚೌಕಟ್ಟಿನಲ್ಲಿ ಸರ್ಕಾರದ ಮತ್ತು ರಾಜಕೀಯ ಪಕ್ಷಗಳ ಕಣ್ತೆರೆಸುವ ಪ್ರಯತ್ನ ಮಾಡೋಣ ಕರ್ನಾಟಕ ರಾಜ್ಯದ ಉಪ್ಪಾರ ಸಮಾಜದ ಎಲ್ಲ ವಕೀಲರು ಮತ್ತು ಪತ್ರಕರ್ತ ಮಿತ್ರರು ಈ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ತಿಳಿಸಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ)ದ ರಾಜ್ಯಾಧ್ಯಕ್ಷ, ವಕೀಲರಾದ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.