'ಪೆದ್ದಿ'ಯಲ್ಲಿನ ಶಿವಣ್ಣ ಲುಕ್‌ಗೆ ಅಭಿಮಾನಿಗಳು ಫಿದಾ!

'ಪೆದ್ದಿ'ಯಲ್ಲಿನ ಶಿವಣ್ಣ ಲುಕ್‌ಗೆ ಅಭಿಮಾನಿಗಳು ಫಿದಾ! Fans are in awe of Shivanna's look in 'Peddi'!

ಲೋಕದರ್ಶನ ವರದಿ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನೀರೀಕ್ಷಿತ 'ಪೆದ್ದಿ' ಸಿನಿಮಾ ಜೂನ್ 4ರಂದು ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಈಗಾಗಲೇ ರೀಲೀಸ್ ಆಗಿರುವ ಚಿತ್ರದ ಒಂದಷ್ಟು ಗ್ಲಿಂಪ್ಸ್ನಲ್ಲಿ ರಾಮ್ ಚರಣ್ ಅವತಾರ ನೋಡಿ ಫ್ಯಾನ್ಸ್‌ ಎಕ್ಸೈಟ್ ಆಗಿದ್ದಾರೆ. ಪೆದ್ದಿಯಲ್ಲಿ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಶಿವಣ್ಣ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ. ಗೌರ್‌ನಾಯ್ಡು ಎಂಬ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಕುಸ್ತಿ ಅಖಾಡದಲ್ಲಿ ಅವರು ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನೀರೀಕ್ಷೆ ಹೆಚ್ಚು ಮಾಡಿದೆ. ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ-ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರಿಬ್ಬರನ್ನು ನೋಡಿ ಥ್ರಿಲ್ ಆಗಿದ್ದಾರೆ. 

ಉಪ್ಪೆನ ಸಿನಿಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್‌ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಎ.ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, 'ವೃದ್ಧಿ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. 'ಮೈತ್ರಿ ಮೂವೀ ಮೇಕರ್ಸ್‌' ಮತ್ತು ಸುಕುಮಾರ್ ರೈಟಿಂಗ್ಸ್‌ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಆರ್ ರತ್ನವೇಲು ಛಾಯಾಗ್ರಹಣ, ನವೀಲ್ ನೂಲಿ ಸಂಕಲನ ಚಿತ್ರಕ್ಕಿದೆ.