ಬೆಳಗಾವಿ: 06 : ಮಹಾನಗರ ಪಾಲಿಕೆಯ ವತಿಯಿಂದ ಗೃಹಭಾಗ್ಯ ಯೋಜನೆಯಡಿ ಪೌರಕಾಮರ್ಿಕರಿಗೆ ಜಿ+3 ಮಾದರಿಯ ವಸತಿಗೃಹಗಳ ನಿಮರ್ಾಣಕ್ಕೆ ಅರಣ್ಯ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭಾನುವಾರ (ಜ.6) ಶಂಕುಸ್ಥಾಪನೆ ನೆರವೇರಿಸಿದರು.
ಅಜಂ ನಗರ ರಸ್ತೆಯಲ್ಲಿರಯವ ಪಿ.ಕೆ.ಕ್ವಾರ್ಟಸರ್್ ಕಾಲನಿಯಲ್ಲಿ ಜಿ+3 ಮಾದರಿಯ ವಸತಿಗೃಹಗಳ ನಿಮರ್ಾಣಕ್ಕೆ ಚಾಲನೆ ನೀಡಿದರು.
ಗೃಹಭಾಗ್ಯ ಯೋಜನೆಯಡಿ ಕೈಗೊಳ್ಳಲಾಗಿರುವ ವಸತಿಗೃಹ ನಿಮರ್ಾಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮುಂಚೆ ಪೌರಕಾಮರ್ಿಕರ ಕಾಲನಿಯಲ್ಲಿ ಒಂದು ಸುತ್ತು ಹಾಕಿದ ಸಚಿವ ಜಾರಕಿಹೊಳಿ ಅವರು, ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಪೌರಕಾಮರ್ಿಕರು ಹಾಗೂ ಲಭ್ಯವಿರುವ ವಸತಿಗೃಹಗಳ ಬಗ್ಗೆ ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ ಅವರು ಭೂಮಿಪೂಜೆ ನೆರವೇರಿಸಿದರು. ಪಾಲಿಕೆ ಸದಸ್ಯರಾದ ಸರಳಾ ಹೇರೇಕರ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಶಿಧರ್ ಕುರೇರ್ ಮತ್ತಿತರರು ಉಪಸ್ಥಿತರಿದ್ದರು.