ಅಥಣಿ: ವಿದ್ಯುತ್ ಶಕ್ತಿಯನ್ನು ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕು. ವಿದ್ಯುತ್ ಬಳಕೆಯಲ್ಲಿ ಉಳಿತಾಯ ಮಾಡುವದರ ಜೊತೆಗೆ ಕೇಲವು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೆಸ್ಕಾಂ ಉಪವಿಭಾಗದ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರ ಶೇಖರ ಬಹುರೂಪಿ ಹೇಳಿದರು
ಅವರು ಇಲ್ಲಿನ ಹೆಸ್ಕಾಂ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಜಾಗ್ರತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಹೋಲಗಳಲ್ಲಿ ಬೆಳೆಗಳಿಗೆ ನೀರು ಹಾಯಿಸುವಾಗ ಮತ್ತು ಪಂಪಸೆಟ್ಗಳನ್ನು ಆರಂಭ ಮಾಡುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅಲ್ಲದೇ ಐಎಸ್ಐ ಗುಣಮಟ್ಟದ ವಸ್ತುಗಳನ್ನೇ ಬಳಸಿದರೇ ವಿದ್ಯುತ್ ಉಳಿತಾಯ ಮತ್ತು ಸುರಕ್ಷತೆ ಇರುತ್ತದೆ.
ಇನ್ನೂ ಮನೆಗಳಲ್ಲಿ ಕಡ್ಡಾಯವಾಗಿ ಎಲ್.ಇ.ಡಿ ಬಲ್ಗಳನ್ನು ಬಳಸಬೇಕು. ಅನಾವಶ್ಯಕವಾಗಿ ವಿದ್ಯುತ್ ಶಕ್ತಿಯನ್ನು ಬಳಕೆ ಮಾಡಬಾದರು. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ವಿದ್ಯುತ್ ಅವಗಢಗಳು ನಡೆಯುತ್ತವೆ. ಆಗ ಹೆಚ್ಚುವರಿ ವೋಲ್ಟೆಜ್ ಆಗಿ ಮನೆಯಲ್ಲಿನ ವಸ್ತುಗಳು ಸುಡುವ ಸಾಧ್ಯತೆ ಇರುತ್ತದೆ.ಅದಕ್ಕಾಗಿ ಎಲ್ಲರೂ ಎಂ.ಸಿ.ಬಿ.ಮತ್ತು ಇ.ಎಲ್.ಸಿ.ಬಿ ಅಳವಡಿಸಿಕೊಳ್ಳಬೇಕು.
ಸ್ವಲ್ಪ ನಿರ್ಲಕ್ಷತನ ವಹಿಸಿದರೆ ಪ್ರಾಣಕ್ಕೆ ಕುತ್ತು ಬರುತ್ತದೆ. ಹೋದ ಪ್ರಾಣಕ್ಕೆ ಸರಕಾರ ಇಲ್ಲವೇ ಹೆಸ್ಕಾಂ ಇಲಾಖೆ ಪರಿಹಾರ ಕೋಡಬಹುದು, ಆದರೆ ಹೋದ ಪ್ರಾಣ ಮರಳಿ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಸುರಕ್ಷತೆಯನ್ನು ಅಗತ್ಯವಾಗಿ ಅನುಸರಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಪಿ.ವಿ. ಸತ್ತಿ ಮತ್ತು ಬಿ.ಎಂ. ಪಾಟೀಲ ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯುತ್ ಶಕ್ತಿಯ ಬೇಡಿಕೆ ಅಧಿಕವಾಗುತ್ತಿದೆ. ಪ್ರತಿ ಮನೆಯಲ್ಲಿ ಉಳಿತಾಯ ಅಗತ್ಯವಿದೆ. ಅದಕ್ಕಾಗಿ ಹೊಸ ತಂತ್ರಜ್ಞಾನದ ಸದ್ಬಳಿಕೆ ಮಾಡಿಕೊಳ್ಳಲು ಸಲಹೆ ನೀಡಿದರು. ಈ ವೇಳೆ ರಾವಸಾಬ ಐಹೊಳೆ, ಶಿವಾನಂದ ನಾಯಿಕ, ವೇಂಕಟೆಶ ಮಾನೆ, ಬೀರಪ್ಪ ಯಕ್ಕಂಚಿ, ಕಲ್ಲಪ್ಪ ಠಕ್ಕಣ್ಣನವರ, ಡಿ.ಮಲಕಪ್ಪ, ಅಶೋಕ ವಾಲಿಕಾರ, ಪರಶುರಾಮ ಚುಬಚಿ, ರಮೇಶ ಬಾದವಾಡಗಿ, ಜಬ್ಬರ ಚಿಂಚಲಿ ಇನ್ನೀತರರು ಉಪಸ್ಥಿತರಿದ್ದರು.