ಬೆಳಗಾವಿ ಬಿಮ್ಸ್ ನಲ್ಲಿ ನಿಲ್ಲದ ಬಾಣಂತಿಯರ ಮರಣ ಮೃದಂಗ : ಒಂದೇ ವಾರದಲ್ಲಿ ಇಬ್ಬರು ಬಲಿ

Death of non-stop barangays in Belgaum Bims: Two killed in one week

ಪಾರೇಶ ಭೋಸಲೆ

ಬೆಳಗಾವಿ : ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಮರಣ ಮೃದಂಗ ಮುಂದೆ ವರೆದಿದ್ದು, ಇಲ್ಲಿ ಬಾಣಂತಿಯರ ಸಾವುಗಳು ಸಾಲು, ಸಾಲಾಗಿ ನಡೆಯುತ್ತಿವೆ. ಆದರೆ ಬಡವ ಬಲ್ಲಿದರ ದೇವಸ್ಥಾನ ಎಂದು ನಂಬಿ ಹೆರಿಗೆಗಾಗಿ ಬರುವ ಈ ಬಿಮ್ಸ್ ಆಸ್ಪತ್ರೆಯಲ್ಲಿ ಈ ಸಾವುಗಳಿಗೆ ನ್ಯಾಯ ಸಿಗುವದು ಯಾವಾಗ ಸ್ವಾಮಿ. ಬಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರ ಜೀವಗಳಿಗೆ ಬೆಲೆ ಇಲ್ಲವಾ ಎನ್ನುವ ಪ್ರಶ್ನೆ ನಾಗಕರಿಕರಲ್ಲಿ ಮನೆ ಮಾಡಿದೆ.

   ಹೌದು ಓದುಗರೇ.... ಕಳೆದ ಒಂದು ವರ್ಷದಲ್ಲಿ ನೂರಾರು ಬಾಣಂತಿಯರ ಸಾವುಗಳು ಇಲ್ಲಿ ಸಂಭವಿಸಿದ್ದು, ಇದೇ ಡಿಸೆಂಬರ್ ಒಂದೇ ತಿಂಗಳಲ್ಲಿ ಮೂವರು ಬಾಣಂತಿಯರ (ಒಂದೇ ವಾರದಲ್ಲಿ ಇಬ್ಬರ) ಪ್ರಾಣ ಪಕ್ಷಿಗಳು ಹಾರಿಹೋಗಿವೆ. ಆದರೆ ಈ ಸಾವುಗಳಿಗೆ ನ್ಯಾಯ ನೀಡಬೇಕಾದ ಸರಕಾರ, ಮತ್ತು ಆರೋಗ್ಯ ಇಲಾಖೆ ಅಸಹಾಯಕರಂತೆ ಕೈಕಟ್ಟಿ ಕುಳಿತುಕೊಂಡರೆ ಬಡವರ ಪಾಡೇನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಬೆಳಗಾವಿ ಬಿಮ್ಸ್ ನಲ್ಲಿ ಪದೇ ಪದೇ ಬಾಣಂತಿಯರ ಹಾಗೂ ಶಿಶುಗಳ ಮರಣದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಯಾರು ಹೊಣೆ. ಇದನ್ನು ಯಾಕೆ ತಡೆಗಟ್ಟುತ್ತಿಲ್ಲ ಎನ್ನುವ ಮಾತು ನಾಗರಿಕರಿಂದ ಕೇಳಿ ಬರತೊಡಗಿದೆ.

   ಬೆಳಗಾವಿಯ ಬಿಮ್ಸ್ ನಲ್ಲಿ ಬಾಣಂತಿಯರ ಹಾಗೂ ಶಿಶುಗಳ ಸಾವಿನ ಬಗ್ಗೆ ಮೊನ್ನೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸದನಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆದು ಸರಕಾರ ಇದಕ್ಕೆ ಉತ್ತರ ನೀಡಿ ಕೈತೊಳೆದುಕೊಂಡಿದೆ. ಆದರೆ ಇಲ್ಲಿ ಬಾಣಂತಿಯರ ಸಾವಿನ ಬಗ್ಗೆ ಕರ‍್ಯದಕ್ಷತೆ ಮಾತ್ರ ಶೂನ್ಯವಾಗಿರುವದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಳಗಾವಿ ಬಿಮ್ಸ್ನಲ್ಲಿ ಸದ್ಯ ಬಾನಂತಿಯರ ಸಾವುಗಳ ಮೇಲೆ ಸಾವು ಸಂಭವಿಸುತ್ತಿದ್ದು, ಇದರಿಂದ ಹೆರಿಗೆಗಾಗಿ ಬಿಮ್ಸ್ಗೆ ಆಗಮಿಸಬೇಕಾದ ಬಡಜನರು ಇಲ್ಲಿ ಆಗಮಿಸಲು ಹೆದರಿಕೊಂಡು ಹಿಮದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಮ್ಸ್ ಆಸ್ಪತ್ರೆಗೆ ಆಗಮಿಸುವವರು ಶ್ರೀಮಂತ ಹಾಗೂ ದುಡ್ಡ ಇರುವ ಜನ ಆಗಮಿಸುವದಿಲ್ಲ. ಬಡಜನರು ಆಗಮಿಸುವ ಇಲ್ಲಿ ಬಡವ ಬಾಣಂತಿಯರ ರಕ್ಷಣೆಗೆ ಸರಕಾರ ದಿಟ್ಟ ಕ್ರಮಕೈಗೊಳ್ಳಬೇಕಾದ ಅನಿವರ‍್ಯತೆ ಇದೆ.

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮತ್ತೊರ್ವ ಬಾಣಂತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಜಿಲ್ಲೆಯ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಪೂಜಾ ಎಂಬುವವರು ಡಿಸೆಂಬರ್ 24ರಂದು ಹೆರಿಗೆಗೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಅವರು ಮೃತಪಟ್ಟಿರುವುದು ಈಗ ಅವರ ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಪೂಜಾ ಅವರಿಗೆ ಹೆರಿಗೆ ನಂತರ ಫಿಟ್ಸ್ ಬಂದು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ತಾಯಿ ಮೃತಪಟ್ಟಿದ್ದು, ಎರಡು ದಿನಗಳ ಶಿಶುವಿಗೆ ಈಗ ಐಸಿಯೂನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿನ ತೂಕವು ಕಡಿಮೆ ಇದೆ. ಹೀಗಾಗಿ ಹೆಚ್ಚಿನ ನಿಗಾವನ್ನು ವೈದ್ಯರು ವಹಿಸಿದ್ದಾರೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಇಬ್ಬರು ಬಾಣಂತಿಯರು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.