ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಪರಶುರಾಮ ಕೆರೆಹಳ್ಳಿ ತೀವ್ರ ಖಂಡನೆ
ಕೊಪ್ಪಳ 27:ಸಂವಿಧಾನ ಶಿಲ್ಪಿ ಡಾ.ಬಿ,ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ದಲಿತ ಮುಖಂಡರಾದ ಪರಶುರಾಮ್ ಕೆರೆಹಳ್ಳಿ ಹೇಳಿದ್ದಾರೆ.
ಅವರು ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ್ದು, ಆರ್.ಎಸ್.ಎಸ್ ಸಿದ್ದಾಂತ ಪ್ರತಿಪಾದಕ ಅಮೀತ ಶಾ ಸಂವಿಧಾನ ಶಿಲ್ಪಿಗೆ ಅಪಮಾನಿಸಿದ್ದು,ಆಶ್ಚರ್ಯವಿಲ್ಲ .ಬಿಜೆಪಿ ತಲ್ಲೆಯಲ್ಲಿ ದೇಶದ ಬಡ,ಅಲ್ಪಸಂಖ್ಯಾತ ದೀನ ದಲಿತರ ಬಗ್ಗೆ ಕಳಕಳಿ ಮತ್ತು ಅಭಿಮಾನ,ಗೌರವ ಹೊಂದಿಲ್ಲ. ಇವರು ಬರೀ ಉಳ್ಳವರ ಪರ ಇದ್ದವರು.
ಕಾರ್ೋರೇಟ ಸಂಸ್ಕೃತಿಯನ್ನು ಪೋಷಿಸುವವರು.ಮನುಸ್ಮೃತಿ ಪ್ರತಿಪಾದಕರು ಎಂದು ಟೀಕಿಸಿದ್ದಾರೆ. ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ಜಾತಿ ವ್ಯವಸ್ಥೆ ಭದ್ರವಾಗಿ ಬೇರೂರಿದೆ.ಇಂತಹ ಕ್ಲೀಷ್ಟ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಯ, ಮೀಸಲಾತಿ ವಿರೋಧಿಗಳು ಅಧಿಕಾರದಲ್ಲಿರಕ್ಕೆ ಲಾಯಕ್ಕಿಲ್ಲ ಎಂದು ದೂರಿದ್ದಾರೆ. ಮನಸ್ಮೃತಿ ಪ್ರತಿಪಾದಕ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಕೋಮುವಾದಿ, ಜಾತಿವಾದಿ ಮತ್ತು ಮನುವಾದ ವ್ಯಕ್ತಿತ್ವವನ್ನು ಹೊಂದಿರುವವರು ಅಮಿತ್ ಶಾ ಅವರಂತ ಕೋಮುವಾದಿಗಳಿಗೆ ಸಂಪುಟದಿಂದ ವಜಾಕ್ಕೆ ಕಾಂಗ್ರೆಸ ಪಕ್ಷದ ಎಸ್ ಸಿ ಘಟಕದ ಜಿಲ್ಲಾ ಮಾಧ್ಯಮ ವಕ್ತಾರರಾದ ಹಾಗೂ ಕೊಪ್ಪಳ ನಗರ ಸಭೆ ಆಶ್ರಯ ಕಮಿಟಿ ನಾಮ ನಿರ್ದೇಶನ ಸದಸ್ಯರಾದ ಪರಶುರಾಮ್ ಕೆರೆಹಳ್ಳಿ ಅವರು ಪತ್ರಿಕ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಎಚ್ ಪೂಜಾರ್ ರವರು ಎಸ್ ಸಿ ಘಟಕದ ತಾಲೂಕ ಅಧ್ಯಕ್ಷರಾದ ಕಾವೇರಿ ರಾಗಿ ರವರು ಹಾಗೂ ಜಿಲ್ಲಾ ಎಸ್ ಸಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಒತ್ತಾಯಿಸಿದ್ದಾರೆ.