ಮಾಡಮಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲಕ್ಕಪ್ಪ ಸನ್ನಿಂಗನ್ನವರ ಆಯ್ಕೆ

Election of Lakkappa Sanningan as President of Madamageri Gram Panchayat

ಮಾಡಮಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲಕ್ಕಪ್ಪ ಸನ್ನಿಂಗನ್ನವರ ಆಯ್ಕೆ 

ಯರಗಟ್ಟಿ : ಸಮೀಪದ ಮಾಡಮಗೇರಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಲಕ್ಕಪ್ಪ ಸನ್ನಿಂಗನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಮಹಾದೇವಿ ಘಟನಟ್ಟಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ವೇಳೆ ಶಾಸಕ ವಿಶ್ವಾಸ ವೈದ್ಯ ಅವರನ್ನು ಬೇಟಿಯಾಗಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸರ್ವ ಸದಸ್ಯರು ಶಾಕರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದಬಸಣ್ಣವರ, ಮಲೀಕಸಾಬ ಭಾಗವಾನ, ಪ್ರಕಾಶ ವಾಲಿ, ಛಾಯಪ್ಪ ಹುಂಡೆಕಾರ,  ಸುರೇಶ ಭಜಂತ್ರಿ, ಗೋಪಾಲ ದಳವಾಯಿ, ಗಿಡಪ್ಪ ಖಂಡ್ರಿ, ಕಡಬಿ ಗ್ರಾ. ಪಂ. ಅಧ್ಯಕ್ಷ ಪ್ರಕಾಶ ಸೂಣದೋಳಿ , ದ್ಯಾಮಣ್ಣ ಬಂಡಿವಡ್ಡರ, ಶಿವಾನಂದ ಘಟನಟ್ಟಿ, ಸತ್ಯಪ್ಪ ಗಸ್ತಿ, ಸೋಮನಿಂಗ ಕಾರ್ಬಾರಿ, ಪುಂಡಲೀಕ ಪೂಜೇರಿ, ಸಂದೀಪ ಕಾರ್ಬಾರಿ, ಈರಣ್ಣ ಕಾರ್ಬಾರಿ, ವಿಠ್ಠಲ ಸನ್ನಿಂಗನವರ, ಮಹೇಶ ಸಣ್ಣಿಠನವರ, ಲಕ್ಕಪ್ಪ ಕುರಿ, ಲಕ್ಷ್ಮಣ ಪೂಜೇರಿ, ಮಹಾಂತೇಶ ಘಟನಟ್ಟಿ, ಹಾಗೂ ಗ್ರಾ. ಪಂ. ಸರ್ವ ಸದಸ್ಯರುಗಾದ ಮಂಜುಳಾ ಬಂಡಿವಡ್ಡರ,   ಗೀತಾ  ಕುರಿ, ತಂಗೆಮ್ಮ ತಳನಟ್ಟಿ, ಲಕ್ಷ್ಮಣ ಬುರ್ಲಿ, ಲಕ್ಷ್ಮಣ ಪೂಜೇರಿ, ಗೌಡಪ್ಪ ತಳನಟ್ಟಿ, ರೇಣುಕಾ  ಕಾರ್ಬಾರಿ, ಮಂಜುಳಾ  ಗಸ್ತಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.