ಇಗ್ನೋ ದಿಂದ ಎಫ್ಎಂ ರೇಡಿಯೋ ವಾಹಿನಿ ‘ಜ್ಞಾನವಾಣಿ’ ಮೂಲಕ ಶಿಕ್ಷಣ

ಲಕ್ನೋ, ಏಪ್ರಿಲ್ 29 ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ)ದ ಲಕ್ನೋ ಪ್ರಾದೇಶಿಕ ಕೇಂದ್ರ ಹಲವು ಐಸಿಟಿ ಆಧಾರಿತ ಸಾಧನಗಳನ್ನು ಬಳಸಿಕೊಂಡು ಕಲಿಯುವವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.ಜ್ಞಾನವಾಣಿಯ ಕಾರ್ಯಕ್ರಮದ ವೇಳಾಪಟ್ಟಿ ಇಗ್ನೋ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಾದೇಶಿಕ ನಿರ್ದೇಶಕ ಮನೋರಮಾ ಸಿಂಗ್ ಅವರು ಬುಧವಾರ ತಿಳಿಸಿದ್ದಾರೆ. ‘ಈ ಕಾರ್ಯಕ್ರಮದ ಬಗ್ಗೆ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು,  ಅದೇ ರೀತಿ ಅನುಸರಿಸಬಹುದು. ಜ್ಞಾನವಾಣಿ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳು ಇಗ್ನೌನಲ್ಲಿ ನೀಡಲಾಗುವ ಕೋರ್ಸ್‌ಗಳನ್ನು ಆಧರಿಸಿವೆ.

ಈ ವಾಹಿನಿ ಮೂಲಕ ರೇಡಿಯೋ ಕಾರ್ಯಕ್ರಮಗಳನ್ನು ಬೆಳಿಗ್ಗೆ ಮತ್ತು ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಪ್ರಸಾರ ಮಾಡಲಾಗುತ್ತದೆ. ಕರೋನಾ ವೈರಸ್‌ಗೆ ಸಂಬಂಧಿಸಿ ಸರ್ಕಾರ ಬಿಡುಗಡೆ ಮಾಡುವ ಮಾರ್ಗಸೂಚಿಗಳನ್ನು ಸಹ ಆಗಿಂದಾಗ್ಗೆ ಪ್ರಸಾರ ಮಾಡಲಾಗುತ್ತದೆ.’ಎಂದು ಅವರು ಹೇಳಿದ್ದಾರೆ.ನೇರ ಫೋನ್-ಇನ್ ಕಾರ್ಯಕ್ರಮವನ್ನು ಆಗಿಂದಾಗ್ಗೆ ಜ್ಞಾನವಾಣಿ ಮೂಲಕ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕಲಿಯುವವರು ನೇರವಾಗಿ ದೂರವಾಣಿ ಮೂಲಕ ತಜ್ಞರೊಂದಿಗೆ ಸಂವಹನ ನಡೆಸಬಹುದು" ಎಂದು ಅವರು ಹೇಳಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ಸಂಜೆ 6.15ರಿಂದ 7 ಗಂಟೆಯವರೆಗೆ ವಿಶೇಷ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಇಗ್ನೌಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಬಯಸುವವರು ದೂರವಾಣಿ ಕರೆ ಮಾಡಿ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.