ನೂತನ ಬಸ್ ಸಂಚಾರಕ್ಕೆ ಚಾಲನೆ

ಲೋಕದರ್ಶನ ವರದಿ

ಅಥಣಿ 20: ತಾಲೂಕಿನ ದೇವರಡ್ಡೇರಹಟ್ಟಿ ಗ್ರಾಮದಲ್ಲಿ ಗ್ರಾಮಕ್ಕೆ ಪ್ರತಿದಿನ ಆಗಮಿಸಲು ಪ್ರಾರಂಭಿಸಲಾದ ಅಥಣಿ-ಮದಭಾವಿ-ಸಲಗರ ಬಸ್ಗೆ ಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರ ಸಾಕಷ್ಟು ದಿನಗಳ ಬೇಡಿಕೆಯಾಗಿದ್ದ ಬಸ್ ವ್ಯವಸ್ಥೆ ಕಲ್ಪಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರಿಗೆ ಗ್ರಮಸ್ಥರು ಕೃತಜ್ಞತೆ ಸಲ್ಲಿಸಿದರು. 

ಅಥಣಿಯಿಂದ ಮದಭಾವಿ ಮಾರ್ಗವಾಗಿ ಸಲಗರ ಗ್ರಾಮಕ್ಕೆ ತೆರಉತ್ತಿದ್ದ ಬಸ್ನ್ನು ಎರಡೂವರೆ ಕಿಲೋಮೀಟರ ಒಳಗಡೆ ಬರುವ ದೇವರಡ್ಡೇರಹಟ್ಟಿ ಗ್ರಾಮದ ಮೂಲಕ ಪ್ರಯಾಣ ಮಾಡಲು ಗ್ರಾಮಸ್ಥರು ಸಾಕಷ್ಟು ದಿನಗಳಿಂದ ಒತ್ತಾಯಿಸುತ್ತಿದ್ದರು, ಈ ಬೇಡಿಕೆ ಈಡೇರಿದ್ದು ಪ್ರತಿದಿನ ಬಸ್ ದೇವರಡ್ಡೇರಹಟ್ಟಿ ಗ್ರಾಮದ ಮೂಲಕ ಸಲಗರ ಗ್ರಾಮಕ್ಕೆ ತೆರಳುತ್ತದೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ, ಪ್ರತಿದಿನ ಹಾಲು, ಮಸರು, ಕಾಯಿ ಪಲ್ಯ ಮಾರಲು ಹೋಗುವಂತಹ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಿದೆ. 

ಬಿಜೆಪಿ ಯುವಧುರೀಣ ಲಕ್ಷ್ಮಣ ಮೆಟಗುಡ್ಡ ಬಸ್ ನ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು. 

ಗ್ರಾಮದ ವಸಂತ ನಾಯಿಕ, ಶ್ರೀಶೈಲ ಇಟ್ನಾಳ, ಸಿದರಾಯ ಹೆಳವರ, ರವೀಂದ್ರ ಹಾವರೆಡ್ಡಿ, ಗೋಪಾಲ ಅಸ್ಕಿ, ಎಸ್.ಡಿ.ನಾಯಿಕ, ಶ್ರೀಶೈಲ ನಾಯಿಕ, ಅಜೀತ ಬೆಳ್ಳಂಕಿ, ಪರಮೇಶ್ವರ ಕುಳಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.