ಅಥಣಿ ತಾಲೂಕು ಸಂಬರಗಿ: ಒಣಗಿದ ಕಬ್ಬು ಕಟಾವು: ಮೇವು ಸಂಗ್ರಹ ಕೇಂದ್ರಗಳಿಗೆ ಸಾಗಾಣಿಕೆ

ಸಂಬರಗಿ 14: ಕೃಷ್ಣಾ ನದಿ, ಕೊಳವೆಬಾವಿ ಹಾಗೂ ತೆರೆದಬಾವಿಗಳು ನೀರಿಲ್ಲದೆ ಬತ್ತಿ ಹೋಗಿರುವ ಪರಿಣಾಮ ಗಡಿ ಗ್ರಾಮಗಳಲ್ಲಿ ನಾಟಿ ಕಬ್ಬು ನೀರಿಲ್ಲದೆ ಬತ್ತಿ ಹೋಗುತ್ತಿದೆ. ರೈತರು ಬತ್ತಿ ಹೋಗಿರುವ ಕಬ್ಬನ್ನು ಕೊನೆಯದಾಗಿ ಕಟಾವು ಮಾಡಿ ಗಡಿ ಭಾಗದಲ್ಲಿರುವ ಮೇವು ಸಂಗ್ರಹ ಕೇಂದ್ರಗಳಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಸಕ್ಕರೆ ಕಾಖರ್ಾನೆಗಳು ಕಬ್ಬಿನ ಸಮಸ್ಯೆ ಎದುರಿಸಬೇಕಾಗುತ್ತದೆ. 

ಅಥಣಿ ತಾಲೂಕು ಸಕ್ಕರೆ ನಾಡು, ಸಿಹಿ ತಾಲೂಕು ಎಂದು ಖ್ಯಾತಿ ಪಡೆದಿದೆ. ಪ್ರತಿ ವರ್ಷವೂ ಕಬ್ಬಿನ ಪ್ರಮಾಣ ಹೆಚ್ಚಾಗುತ್ತಿದ್ದು 5 ಸಕ್ಕರೆ ಕಾಖರ್ಾನೆಗಳು ಕಬ್ಬು ನುರಿಸಿದರೂ ಸಹ ಕಬ್ಬು ಮುಗಿಯುತ್ತಿರಲಿಲ್ಲ. ಈ ವರ್ಷ ಕಳೆದ ಜನೆವರಿಯಿಂದ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು ಮಾಚರ್್ ಏಪ್ರೀಲ್ನಂದು ಕೊಳವೆಬಾವಿ ಹಾಗೂ ತೆರೆದಬಾವಿಗಳು ಬತ್ತಿ ಹೋಗಿವೆ. ನೀರಿಲ್ಲದೆ ಕಬ್ಬು ಬತ್ತಿ ಹೋಗಿವೆ. ಈ ಕಬ್ಬು ಹಾಳಾಗಿ ಹೋಗಬಾರದೆಂಬ ಕಾರಣಕ್ಕೆ ರೈತರು 2400 ಟನ್ ರಂತೆ ಕಟಾವು ಮಾಡಿ ಮೇವು ಸಂಗ್ರಹ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ. ಗಡಿ ಗ್ರಾಮಗಳಲ್ಲಿ ಲಕ್ಷಾಂತರ ರೂ ವೆಚ್ಚ ಮಾಡಿ ಕೃಷ್ಣಾ ನದಿಯಿಂದ ಪೈಪ್ಲೈನ್ ಮೂಲಕ ಕನಿಷ್ಟವಾಗಿ 40 ಕಿ.ಮೀ ವರೆಗೆ ನೀರು ಸರಬರಾಜು ಮಾಡಿದ್ದಾರೆ. ಕೃಷ್ಣಾ ನದಿಗೆ ನೀರಿಲ್ಲದ ಕಾರಣ ಕಳೆದ 2 ತಿಂಗಳಿನಿಂದ ಪೈಪ್ಲೈನ್ಗೆ ನೀರು ಬರುತ್ತಿಲ್ಲ. ಆದರೆ ಹೆಸ್ಕಾಂ ಬಿಲ್ಲನ್ನು ಕನಿಷ್ಟವಾಗಿ ಪಾವತಿಸಬೇಕಾಗುತ್ತದೆ. ರೈತರು ಸದ್ಯದಲ್ಲಿ ಗೊಂದಲಮಯದಲ್ಲಿದ್ದಾರೆ. 

ಪಾರ್ಥನಹಳ್ಳಿ, ಗುಂಡೇವಾಡಿ, ಬಳ್ಳಿಗೇರಿ, ಅನಂತಪೂರ, ಮಲಾಬಾದ, ತಾಂವಶಿ, ಸಂಬರಗಿ, ಮದಬಾವಿ, ಜಕಾರಟ್ಟಿ, ವಿಷ್ಣುವಾಡಿ, ಶಿವನೂರ, ತೆವರಟ್ಟಿ, ಅಬ್ಬಿಹಾಳ, ಮಾಯನಟ್ಟಿ, ಚಮಕೇರಿ ಈ ಭಾಗಗಳಲ್ಲಿ ಸುಮಾರು 2000 ಎಕರೆಕ್ಕಿಂತ ಹೆಚ್ಚಿನ ಕಬ್ಬು ಬತ್ತಿ ಹೋಗಿದೆ. ರೈತರು ಸಾಲ ಪಡೆದು ನದಿಯಿಂದ ಪೈಪ್ಲೈನ್ ಮಾಡಿದ್ದಾರೆ. ಕಬ್ಬು ಬತ್ತಿ ಹೋದ ಕಾರಣ ರೈತರು ತಮ್ಮ ಸಾಲವನ್ನು ಹೇಗೆ ಮರುಪಾವತಿ ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ. ಸದ್ಯದಲ್ಲಿ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ ಇಂತಹ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರು ಗಡಿ ಗ್ರಾಮಗಳಲ್ಲಿ ಕಬ್ಬಿನ ಜೊತೆ ದ್ರಾಕ್ಷಿತೋಟ ಮಾಡಿದ್ದಾರೆ. ಒಂದು ಎಕರೆ ದ್ರಾಕ್ಷಿ ನಾಟಿ ಮಾಡಲು ಸುಮಾರು 2ಲಕ್ಷ ರೂ ಖಚರ್ು ಮಾಡಬೇಕಾಗುತ್ತದೆ. ರೈತರು ಕಬ್ಬು ಬಿಟ್ಟು ದ್ರಾಕ್ಷಿಗೆ ಮಹಾರಾಷ್ಟ್ರದಿಂದ ತಾಕಾರಿ ಮೈಶಾಳ ಕಾಲುವೆ ಹರಿಯುತ್ತಿದ್ದು ಅಲ್ಲಿ ಪ್ರತಿ ಟ್ಯಾಂಕರ್ಗೆ 500ರಂತೆ ದರ ನೀಡಿ ಕೊನೆಯ ಹಂತದಲ್ಲಿ ಕಬ್ಬು ಬತ್ತಿ ಹೋದರೆ ಪರವಾಗಿಲ್ಲ, ದ್ರಾಕ್ಷಿಯಾದರೂ ಉಳಿಯಲಿ ಎಂದು ರೈತರು ಆಸೆ ಇಟ್ಟು ಅವರ ಜೀವಗಳನ್ನು ಕೈಯಲ್ಲಿ ಹಿಡಿದ ಕುಳಿತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ರೈತರು ಸಂಕಷ್ಟದಲ್ಲಿದ್ದಾರೆ. 

ಈ ಕುರಿತು ಅಥಣಿ ತಾಲೂಕಾ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಇವರನ್ನು ಸಂಪಕರ್ಿಸಿದಾಗ ನೀರಿಗಾಗಿ ಹೋರಾಟ ಮಾಡಿದರೂ ಇನ್ನು ನದಿಗೆ ನೀರು ಬಂದಿಲ್ಲ. ಕೃಷ್ಣಾ ತೀರ ಹಾಗೂ ಗಡಿ ಭಾಗದ ಗ್ರಾಮಗಳಲ್ಲಿ ಸುಮಾರಾಗಿ 5000 ಎಕರೆ ಕಬ್ಬು ಬತ್ತಿ ಹೋಗಿದೆ.  ಸಕಾರ ಬತ್ತಿ ಹೋಗಿರುವ ಕಬ್ಬನ್ನು ಸವರ್ೆ ಮಾಡಿ ಎಕರೆಗೆ 20,000 ಸಹಾಯಧನ ನೀಡಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕೆಂದು ಅವರು ಒತ್ತಾಯಿಸಿದರು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದೆಂದು ಅವರು ಒತ್ತಾಯಿಸಿದರು.