ಡಾ.ವಿನಯಾ ಹೂಗಾರ ತಹಶೀಲ್ದಾರರಾಗಿ ಅಧಿಕಾರ ಸ್ವೀಕಾರ
ತಾಳಿಕೋಟೆ 04: ತಾಲೂಕಿನ ನೂತನ ದಂಡಾಧಿಕಾರಿಗಳಾಗಿ ಡಾ.ವಿನಯಾ ಅರವಿಂದ ಹೂಗಾರ ಗುರುವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಕೀರ್ತಿ ಚಾಲಕ ಅವರು ಅಧಿಕಾರ ಹಸ್ತಾಂತರಿಸಿದರು. ಕೆಎಎಸ್2020ರ ಬ್ಯಾಚಿನ ಅಧಿಕಾರಿಯಾಗಿರುವ ಡಾ.ವಿನಯಾ ಹೂಗಾರ ಅವರು ವೈದ್ಯಕೀಯ ಪದವಿಧರೆಯಾಗಿದ್ದು ತಾಳಿಕೋಟಿ ತಾಲೂಕಿನ ಹಿರೂರ ಗ್ರಾಮದವರಾಗಿದ್ದಾರೆ.