ಡಾ. ಹರ್ಷವರ್ಧನ್‌ ಅವರೊಂದಿಗೆ ಶ್ರೀರಾಮುಲು ವಿಡಿಯೋ ಕಾನ್ಫರೆನ್ಸ್

ಬೆಂಗಳೂರು, ಏ.24,ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೊಂದಿಗೆ ರಾಜ್ಯ  ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದಲ್ಲಿನ ಕೊರೊನಾ‌ ಸ್ಥಿತಿಗತಿ  ಕುರಿತು  ವಿಡಿಯೋ ಕಾನ್ಫರೆನ್ಸ್ ನಡೆಸಿದರು.ವಿಡಿಯೊ ಕಾನ್ಫರೆನ್ಸ್ ಬಳಿಕ ಶ್ರೀರಾಮಲು  ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದೇವೆ. ದೇಶದ  ಕೊರೊನಾ‌‌ ಸೋಂಕಿತ ರಾಜ್ಯಗಳ ಪೈಕಿ ಕರ್ನಾಟಕ 11ನೇ ಸ್ಥಾನದಲ್ಲಿದೆ. ಪ್ಲಾಸ್ಮಾ ಚಿಕಿತ್ಸೆ ಸೇರಿದಂತೆ ಕೋವಿಡ್-19  ಹರಡದಂತೆ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ  ಎಲ್ಲಾ ಮಾಹಿತಿ ನೀಡಿದ್ದೇವೆ. ರೆಡ್ ಝೋನ್ ವಾರ್ಡ್ ಗಳು ಸಂಪೂರ್ಣ ಲಾಕ್‌ ಡೌನ್  ಆಗಿವೆ. ಮುಂಜಾಗ್ರತೆ ವಹಿಸಿಯೇ 10 ಇಲಾಖೆಯ ಸಿಬ್ಬಂದಿ ಕೆಲಸಕ್ಕೆ ಅವಕಾಶ ನೀಡಲಾಗಿದೆ  ಎಂದರು. ರಾಮನಗರ ಗ್ರೀನ್ ಝೋನ್‌ನಲ್ಲಿತ್ತು. ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ‌ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ  ವ್ಯಕ್ತಪಡಿಸಿದ ಅಭಿಪ್ರಾಯ ಸರಿ ಇತ್ತು. ಹೀಗಾಗಿ ಅವರ ಅಭಿಪ್ರಾಯವನ್ನಾಧರಿಸಿ ಆರೋಪಿತರನ್ನು ಈಗ ಬೇರೆಡೆಗೆ ಸ್ಥಳಾಂತರ ಮಾಡಿರುವುದಾಗಿ ಶ್ರೀರಾಮುಲು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.