ನವದೆಹಲಿ, ಜ ೨೮, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಫೆಬ್ರವರಿ ೨೧ ರಿಂದ ೨೪ರವರೆಗೆ ಭಾರತ ಭೇಟಿಗೆ ಸಮಯ ನಿಗದಿಯಾಗಿದೆ. ಅಹಮದಾಬಾದ್ ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಒಂದು ದಿನ ಸಾರ್ವಜನಿಕ ಕಾರ್ಯಕ್ರಮದಲ್ಲೂ ಭಾಗಿಯಾಗುವ ಸಾಧ್ಯತೆಯಿದೆ ಆದರೆ, ಈ ಕಾರ್ಯಕ್ರಮವನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ ಎಂದು ಉನ್ನತ ಮೂಲಗಳು ಹೇಳಿವೆಮುಂಬರಲಿರುವ ಅಮೆರಿಕಾ ಅಧ್ಯಕ್ಷರ ಭೇಟಿ ಹಿನ್ನಲೆಯಲ್ಲಿ ಅಮೆರಿಕಾ ಸರ್ಕಾರ ಫೆ ೨೧ ರಿಂದ ೨೪ರವರೆಗೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ನ ಪ್ರಸಿಡೆನ್ಷಿಯಲ್ ಸೂಟ್ ಸೇರಿದಂತೆ ಹಲವು ಕೊಠಡಿಗಳನ್ನು ತನ್ನ ಗಣ್ಯರ ವಾಸ್ತವ್ಯಕ್ಕೆ ಗೊತ್ತು ಮಾಡಿದೆ ಎಂದು ಉನ್ನತ ಅಧಿಕಾರಿ ಮೂಲಗಳು ಹೇಳಿವೆ.
ಈ ಹಿಂದಿನ ಅಮೆರಿಕಾ ಅಧ್ಯಕ್ಷರುಗಳಾದ ಬರಾಕ್ ಓಬಾಮಾ, ಬಿಲ್ ಕ್ಲಿಂಟನ್ ಸೇರಿದಂತೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೆಹಲಿಯ ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಕಳೆದ ವರ್ಷ ಭಾರತದ ಪ್ರಧಾನಿ ಮೋದಿ ಅವರಿಗಾಗಿ ಅಮೆರಿಕಾದ ಹೂಸ್ಟನ್ ನಲ್ಲಿ "ಹೌಡಿ ಮೋದಿ" ಎಂಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈಗ ಭಾರತಕ್ಕೆ ಭೇಟಿ ನೀಡುತ್ತಿರುವ ಟ್ರಂಪ್ಗಾಗಿ ಇಂತಹದೇ ಕಾರ್ಯಕ್ರಮ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಆಯೋಜಿಸಲು ಸಿದ್ದತೆಗಳು ನಡೆದಿವೆ ಎಂದು ವರದಿಯಾಗಿದೆ.