ಕೊಪ್ಪಳ 29: ಮಾನಸಿಕ ಒತ್ತಡಕ್ಕೆ ಮಣಿದು ಯಾರೂ ದುಶ್ಚಟಗಳಿಗೆ ಬಲಿಯಾಗದೇ ಸ್ವಸ್ಥ ಜೀವನವನ್ನು ನಡೆಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀನಿವಾಸ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರಾಗೃಹ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದ ಫೆ. 28ರಂದು ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಮಾದಕ ಔಷಧ ಅಥವಾ ಮದ್ದು ದುರ್ಬಳಕೆಗೆ ಬಲಿಯಾದವರಿಗೆ ಕಾನೂನು ಸೇವೆಗಳು ಮತ್ತು ಮಾದಕ ಔಷಧ, ವಿಪತ್ತಿನ ನಿಮರ್ೂಲನೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಂಗಾವತಿಯ ಮಾನಸಿಕ ಆರೋಗ್ಯ ಕೇಂದ್ರದ ಮನೋವೈದ್ಯ ಡಾ.ವಾಧಿರಾಜ ಗೋರೆಬಾಳ ಅವರು ಮಾತನಾಡಿ, ಮಾನಸಿಕ ಸ್ಥಿರತೆಯೇಆರೋಗ್ಯ. ಮದ್ಯ ಸೇವನೆಯಿಂದ ಸಾಮಾಜಿಕ ದೃಷ್ಕೃತ್ಯಗಳು ಹೆಚ್ಚುತ್ತಿವೆ. ಅದರಿಂದ ಆರೋಗ್ಯ ಸಮಸ್ಯೆ, ನರ ದೌರ್ಬಲ್ಯ, ನಿದ್ರೆ ಬಾರದಿರುವುದು, ಗಾಬರಿ, ತಲೆ ಸುತ್ತುವಿಕೆ ಮುಂತಾದ ಆರೋಗ್ಯ ಸಮಸ್ಯೆಗಳು ಬರುತ್ತವೆ. ಜೊತೆಗೆ ತಂಬಾಕು, ಗುಟ್ಕಾ ತಿನ್ನುವುದರಿಂದ ಮತ್ತು ಬೀಡಿ ಸೇದುವುದರಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಎಂದು ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ತಜ್ಞೆ ಪುಷ್ಪಾ ಥೆರೆಸಾ ಮಾನಸಿಕ ಅಸ್ವಸ್ಥತೆ ಬಗ್ಗೆ ತಿಳಿಸಿದರು. ಜಿಲ್ಲಾ ಕಾರಾಗೃಹ ಪ್ರಭಾರಿ ಅಧೀಕ್ಷಕ ಹನಮಂತ್ರಾಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರಾಗೃಹದ ಸಿಬ್ಬಂದಿ ಹಾಗೂ ಖೈದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.