ಲೋಕದರ್ಶನ ವರದಿ
ಎನ್‌ಎಸ್‌ಎಸ್‌ನಿಂದ ದೇಶ ಕಟ್ಟುವ ಕೆಲಸ ಮಾಡಿ: ಪ್ರೊ. ಕಪಾಲಿ
ವಿಜಯಪುರ 14: ಇಂದಿನ ಯುವಕರು ನಮ್ಮ ದೇಶದ ಸೈನಿಕರು ಗಡಿಯಲ್ಲಿ ಕಾದಂತೆ ಅದರಂತೆ ವಿದ್ಯಾರ್ಥಿಗಳು ಎನ್ ಎಸ್ ಎಸ್ ಸೇವೆಯ ಮೂಲಕ ಕಾರ್ಯಪ್ರವೃತ್ತರಾಗಬೇಕಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ರಾಜು ಬಿ.ಕಪಾಲಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ,ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ್ಘ 2 ಸಂಯೋಜನೆಯಡಿ 2024-25 ನೇ ಸಾಲಿನ ಹಂಚನಾಳ ಪಿಹೆಚ್ ಗ್ರಾಮದಲ್ಲಿ ದಿ. 13 ರವಿವಾರ ಎನ್‌ಎಸ್‌ಎಸ್ 7ದಿನಗಳ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುವಕರು ಸ್ವಯಂ ಸೇವೆಯ ಮೂಲಕ ದೇಶ ಸೇವೆಗೆ ಮುಂದಾಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಅದರಂತೆ ವಿದ್ಯಾರ್ಥಿಗಳು ಇಂತಹ 7 ದಿನಗಳ ಕ್ಯಾಂಪ್‌ಗಳು ಕೇವಲ ಸ್ವಚ್ಛತೆ ಅಲ್ಲದೆ ಶಿಸ್ತು,ವ್ಯಕ್ತಿತ್ವ ವಿಕಸನ, ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಇಂತಹ ಶಿಬಿರವು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ 7 ದಿನಗಳ ವಿಶೇಷ ಶಿಬಿರದ ಮೂಲ ನಿಯಮ ಮತ್ತು ಶಿಬಿರದ ಮುಖ್ಯ ಅಂಶಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು. ಎನ್‌ಎಸ್‌ಎಸ್ ಧ್ಯೇಯ ಉದ್ದೇಶಗಳು ಸ್ವಚ್ಛತೆ, ವ್ಯಕ್ತಿತ್ವ ವಿಕಸನ, ಜೀವನದ ಮೌಲ್ಯಗಳನ್ನು ತಿಳಿಸಲು ಶಿಬಿರವು ಒಟ್ಟಾರೆಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತುಂಬಾ ಸಹಾಯಕಾರಿಯಾಗಿದ್ದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರೀಯಾಶೀಲತೆ, ಮತ್ತು ಉನ್ನತ ವ್ಯಕ್ತಿತ್ವಕ್ಕೆ ನಾಂದಿಯಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ. ಅನಿಲ್ ಬಿ ನಾಯಕ್ ರಾಷ್ಟ್ರೀಯ ಸೇವಾ ಯೋಜನೆಯ ಧೆ್ಯೇಯ ಮತ್ತು ಉದ್ದೇಶಗಳ ಬಗ್ಗ ವಿದ್ಯಾರ್ಥಿಗಳಿಗೆ ತಿಳಿಸಿದರು.
ಹಂಚಿನಾಳ ಪಿ ಹೆಚ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಕೆ ಜಿ ಲಮಾಣಿ ಸ್ವಚ್ಛತೆ ಮತ್ತು ಮೊಬೈಲ್ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಮಹಾವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ 1 ್ಘ 2 ಅಧಿಕಾರಿಗಳಾದ ಡಾ.ಮಿಲನ್ ರಾಠೋಡ್, ಡಾ. ತರನ್ನುಮ್ ಜಬೀನಖಾನ್, ಹಂಚಿನಾಳ ಪಿ ಹೆಚ್ ಗ್ರಾಮದ ಮುಖಂಡರು, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.