ನಾಲ್ಕು ತಾಲ್ಲೂಕುಗಳ ಆರೋಗ್ಯಾಧಿಕಾರಿಗಳಿಗೆ 6400 ಮಾಸ್ಕ್ ಹಸ್ತಾಂತರಿಸಿದ ಜಿಲ್ಲಾಧಿಕಾರಿ

ಬೆಂಗಳೂರು, ಏಪ್ರಿಲ್ 28,ಬೆಂಗಳೂರು  ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಕೊರೋನಾ ವೈರಾಣು ಸೋಂಕು  ತಡೆಗಟ್ಟಲು, ದಾನಿಗಳು ನೀಡಿದ ಮಾಸ್ಕ್ ಗಳನ್ನು ಜಿಲ್ಲೆಯ ಎಲ್ಲಾ ನಾಲ್ಕು ತಾಲ್ಲೂಕುಗಳ  ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.ದೇವನಹಳ್ಳಿ  ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ  ಕಚೇರಿಯಲ್ಲಿ ಇಂದು ಮನೆ ಮನೆಗೆ ಭೇಟಿ ನೀಡಿ ಕೋವಿಡ್-19 ಆರೋಗ್ಯ ಸಮೀಕ್ಷೆ ನಡೆಸುವ ಆಶಾ  ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ವಿತರಿಸಲು ಸುರಕ್ಷತಾ ಕ್ರಮವಾಗಿ  ಎಲ್ಲಾ ತಾಲ್ಲೂಕು ಆರೋಗ್ಯ ಆಧಿಕಾರಿಗಳಿಗೆ ತಲಾ 1600 ಮಾಸ್ಕ್ ಗಳಂತೆ ಒಟ್ಟು 6400  ಮಾಸ್ಕ್ ಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಹಸ್ತಾಂತರ ಮಾಡಿದರು.ಈ‌ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ್, ದೇವನಹಳ್ಳಿ  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ನರಸಿಂಹಮೂರ್ತಿ  ಹಾಗೂ ಇತರರು ಉಪಸ್ಥಿತರಿದ್ದರು.