ಗಣಪತಿ ಪ್ರತಿಷ್ಠಾನ ಅಂಗವಾಗಿ ಧರ್ಮಸಭೆ, ನೃತ್ಯ ಮತ್ತು ಸಂಗೀತ ವೈಭವ ಹಾಗೂ ಸನ್ಮಾನ ಕಾರ್ಯಕ್ರಮ

ಗದಗ:21: ಹಿಂದೂ ಮಹಾಗಣಪತಿ ಗದಗ ಜಿಲ್ಲಾ 3ನೇ ವರ್ಷದ ಗಣಪತಿ ಪ್ರತಿಷ್ಠಾನ ಅಂಗವಾಗಿ ಧರ್ಮಸಭೆ, ನೃತ್ಯ ಮತ್ತು ಸಂಗೀತ ವೈಭವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಸೆ. 22 2024 ರವಿವಾರ ಸಂಜೆ 6 ಗಂಟೆಗೆ ಹಿಂದೂ ಮಹಾಗಣಪತಿ ವೇದಿಕೆಯನ್ನ ನಗರದ  ಕಾಟನ್ ಮಾರ್ಕೆಟ್ ರಸ್ತೆಯಲ್ಲಿ ಏರಿ​‍್ಡಸಿಲಾಗಿದೆ ಎಂದು ಶ್ರೀ ಸುದರ್ಶನವ ಚಕ್ರ ಯುವ ಮಂಡಳ ಹಿಂದೂ ಮಹಾಗಣಪತಿ ಗದಗ  ಜಿಲ್ಲಾಧ್ಯಕ್ಷ ಸುಧೀರ ಕಾಟೇಗಾರ ತಿಳಿಸಿದರು.        

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ಮತ್ತು ಸಂಗೀತ ವೈಭವ ಕಾರ್ಯಕ್ರಮ ನೆರವೆರುವುದು. ಮ.ನಿ.ಪ್ರ.ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಶ್ರೀ ಅನ್ನದಾನೀಶ್ವರ ಮಠ ಮಣಕವಾಡ ಇವರು ದಿವ್ಯ ಸಾನಿಧ್ಯವಹಿಸಿ ಧರ್ಮೋಪದೇಶ ನೀಡಲಿದ್ದಾರೆ.   

 ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್‌. ವಿ. ಸಂಕನೂರ ಆಗಮಿಸಲಿದ್ದು, ಅತಿಥಿಗಳಾಗಿ ಗಣ್ಯಮಾನ್ಯರು ಆಗಮಿಸುವರು ಮತ್ತು ದಾನಿಗಳಿಗೆ ಹಾಗೂ ಗಣ್ಯಮಾನ್ಯರಿಗೆ ಈ ಸಂದರ್ಭದಲ್ಲಿ  ಸನ್ಮಾನ ಕಾರ್ಯಕ್ರಮ ಏರಿ​‍್ಡಸಲಾಗಿದೆ ಹಾಗೂ ರಂಗೋಲಿ ಸ್ಪರ್ಧೆ, ಚಸ್ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ,ಮಹಿಳೆಯರ ಮ್ಯಾಚಿಂಗ್ ಸ್ಪರ್ಧೆ, ಸ್ಮರಣ ಶಕ್ತಿ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಲಾಗುವುದು.    

ಸೆ.24 2024 ರಂದು ಬೆಳಿಗ್ಗೆ 10-30 ಕ್ಕೆ ಲಾಯನ್ಸ್‌ ಕ್ಲಬ್ ಸಂಯೋಗದೊಂದಿಗೆ ಹುಬ್ಬಳ್ಳಿಯ ಜಯಪ್ರದಾ ಆಸ್ಪತ್ರೆ ವೈದ್ಯರಿಂದ ಉಚಿನ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಜರಗುವುದು. ಸೆ. 25 2024 ರಂದು ಬೆಳಿಗ್ಗೆ 9ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮದ್ಯಾಹ್ನ 12-00ಕ್ಕೆ ಮಹಾ ಅನ್ನಸಂತರೆ​‍್ಣ ಹಾಗೂ ಬೃಹತ ರಕ್ತದಾನ ಶಿಬಿರ ನೆರೆವೆರುವುದು. ಸೆ. 26 2024ರಂದು ಸಂಜೆ 5-00ಕ್ಕೆ ಶ್ರೀ ಗಣಪತಿಗೆ 21 ದಿನ ಪೂಜಿಸಿದ ಹಣ್ಣು ಹಂಪಲ, ಅಂತರಕಾಯಿ, ಬಂಗಾರ, ಬೆಳ್ಳಿ ಆಭರಣಗಳು ಸವಾಲು ಕಾರ್ಯಕ್ರಮ ಜರುಗಲಿದೆ.    

  ಸೆ. 27 2024 ರಂದು ಬೆಳಿಗ್ಗೆ 9 ಕ್ಕೆ ಸಾಂಸ್ಕೃತಿಕ ಮೇಳ ಹಾಗೂ ಡಿ.ಜೆ. ಸಿಸ್ಟಮನೊಂದಿಗೆ ಬೃಹತ ಮೆರವಣಿಗೆಯ ಮಾರ್ಗ ವಿರೇಶ್ವರ ಲ್ಯಾಬರಿ, ಬ್ಯಾಂಕ ರೋಡ, ಟಾಂಗಾಕೂಟ, ನಾಮಜೋಶಿ ರೋಡ, ಶ್ರೀ ದತ್ತಾತ್ರಯ ರಸ್ತೆ ಮೂಲಕ ಬೀಷ್ಮ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಈ ಎಲ್ಲ ಕಾರ್ಯಕ್ರಮಗಳಲ್ಲಿ ಗದಗ ಜಿಲ್ಲೆಯ ಹಾಗೂ ಗದಗ-ಬೆಟಗೇರಿ ಸಮಸ್ತ ಜನತೆ ಆಗಮಿಸಿ ಕಾರ್ಯಕ್ರಮ ಯಶ್ವಸಿಗೊಳಿಸಲು ಹಿಂದೂ ಮಾಹಾಗಣಪತಿ ಗದಗ ಜಿಲ್ಲಾ ಸರ್ವ ಪಧಾಧಿಕಾರಿಗಳು ಹೇಳಿದರು.    

ಈ ವೇಳೆ ಶಿವನಗೌಡ್ರ, ರಾಘವೇಂದ್ರ ಹಬೀಬ,ಮಂಜುನಾಥ ಖೋಡೆ,ರಮೇಶ ಸಜ್ಜಗಾರ, ವಂದನಾ ವರ್ಣೇಕರ,ಅಶ್ವಿನಿ ಜಗಪತ್,ಮಂಜು ಸೇರಿದಂತೆ ಇತರರು ಭಾಗಿಯಾಗಿದ್ದರು.