ಸಹಮತದಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ಸಾಧಿಸಲು ಸಾದ್ಯ -ಲಕ್ಷ್ಮಣ ಸವದಿ

ಅಥಣಿ 30:  ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವದು ಮೊದಲ ಆದ್ಯತೆಯಾಗಬೇಕು, ಅಧಿಕಾರಿಗಳು ಜನಪ್ರತಿನಿಧಿಗಳು ಒಟ್ಟಿಗೆ ಸಹಮತದಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ಸಾಧಿಸಲು ಸಾದ್ಯವಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಚುನಾಯಿತ ಪುರಸಭೆ ಸದಸ್ಯರ ಸಾಮಾನ್ಯ ಸಭೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.  ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೂಲಭೂತ ಅವಶ್ಯಕತೆಗಳಿಗೆ ತಕ್ಕಂತೆ ನೀತಿ ನಿಯಮಗಳನ್ನು ಜಾರಿಗೆ ತರುವ ಮೂಲಕ ಜನರಿಗೆ ಸರಕಾರದ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯಬೇಕು.     ಅಲ್ಲದೆ 25 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಪಟ್ಟಣದ ಜೊಡು ಕೆರೆಗಳ ಸೌಂದರ್ಯಕರಣ ಕಾಮಗಾರಿ ಹಾಗೂ 10 ಕೋಟಿ ರೂ.ಗಳ ಭಾಗಿರಥಿ ನಾಲಾ ಅಭಿವೃಧ್ದಿ ಕಾಮಗಾರಿಯನ್ನು ಟಂಡರ್ ಪ್ರಕ್ರಿಯೇ ನಡೆಸಿ ಶೀಘ್ರದಲ್ಲೆ ಕಾಮಗಾರಿಗೆ ಚಾಲನೆ ನೀಡಿಬೆಕಿದೆ.     

ಎಲ್ಲ ಗೌರವಾನ್ವಿತ ಪುರಸಭೆ ಸದಸ್ಯರು ಪಟ್ಟಣದ ಸಮಗ್ರ ಅಭಿವೃದ್ದಿಗೆ ಪೂರಕವಾದ ಕಾರ್ಯಗಳನ್ನು ಮಾಡಬೇಕು. ಸರಕಾರದ ಮಟ್ಟದಲ್ಲಿ ಪುರಸಭೆಗೆ ಬೇಕಾಗುವ ಅನುದಾನವನ್ನು ತರುವ ಕಾರ್ಯವನ್ನು ನಾನು ಮಾಡುತ್ತೇನೆ ಎಂದ ಅವರಯ ಎಲ್ಲ ಸದಸ್ಯರ ಸಹಕಾರದಿಂದ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಾದ್ಯವಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಗಳು ಒಟ್ಟಾಗಿ ಕಾರ್ಯ ಮಾಡುವ ಮೂಲಕ ಪಟ್ಟಣದ ಸರ್ವಾಂಗೀಣ ಅಭಿವೃದ್ದಿ ಮಾಡುವ ಸಂಕಲ್ಪ ಮಾಡೋಣ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರು ಮಾತನಾಡಿ, ಪುರಸಭೆ ಸದಸ್ಯರು ಸೂಚಿಸುವ ಎಲ್ಲ ಕಾರ್ಯಗಳನ್ನು ಅನುದಾನದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಾಬೇಕಾಗುತ್ತದೆ.  

ಅಲ್ಲದೆ ಶಾಸಕ ಲಕ್ಷ್ಮಣ ಸವದಿ ಅವರು ಈಗಾಗಲೆ 25 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದು ಜೊಡಿ ಕೆರೆ ಹಾಗೂ ಭಗೀರಥಿ ನಾಲಾ ಕಾಮಗಾರಿಯನ್ನು ಕೈಗೊಳ್ಳುವ ಕಾರ್ಯ ನಡೆಯುತ್ತಿದ್ದು ಅಧ್ಯಕ್ಷರ ಅಪ್ಪನೆಯ ಮೇರೆಗೆ ವಿವಿಧ ವಾರ್ಡಗಳನ್ನುನ ಕಾಮಗಾರಿ ಜೊತೆಗೆ ಪಟ್ಟಣದ ಪ್ರಮುಖ ಬೀದಿಗಳಿಗೆ ಸ್ವಾಗತ ಕಮಾನುಗಳ ನಿರ್ಮಾಣ ಹಾಗೂ ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ, ಸ್ವಚ್ಚತೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು  ಸಭೆಯಲ್ಲಿ  ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾದ್ಯಕ್ಷೆ ಭುವನೇಶ್ವರಿ ಯಂಕಂಚಿ ಉಪಸ್ಥಿತರಿದ್ದರು.  

ಸಭೆಯಲ್ಲಿ ಪುರಸಭೆ ಸದಸ್ಯರಾದ ದತ್ತಾ ವಾಸ್ಟರ, ಮಲ್ಲೇಶ ಹುದ್ದಾರ, ರಾವಸಾಹೇಬ ಐಹೊಳೆ, ವೀಲೀನರಾಜ ಯಳಮಲ್ಲಿ, ರಿಯಾಜ ಸನದಿ, ಸಂತೋಷ ಸಾವಡಕರ,  ಪ್ರಮೋದ ಬಿಳ್ಳೂರ, ಮಲ್ಲಿಕಾರ್ಜುನ ಬುಟಾಳಿ,  ರಾಜೂ ಗುಡೊಡಗಿ, ಕಲ್ಲೆಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ಶಾಂತಾ ಲೋಣಾರೆ ಮಾತನಾಡಿದರು. ಸದಸ್ಯರಾದ ಸವರಾಜ ಪಾಟೀಲ, ಸೈಯದ್ ಅಮೀನ್ ಗದ್ಯಾಳ, ಬಸವರಾಜ ನಾಯಿಕ, ರಮೇಶ ಪವಾರ,  ಉದಯ ಸೊಳಸಿ, ವಿದ್ಯಾ ಐಹೋಳೆ, ವಿದ್ಯಾ  ಹಳ್ಳದಮಳ, ವಿದ್ಯಾ ಬುಲಬುಲೆ, ರುಕಮಾಬಾಯಿ ಗಡದೆ, ಬಿಬಿಜಾನ ತಾಂಬೋಳೆ, ಜುಲೇಖಅಬಿ ಖೇಮಲಾಪೂರ, ಸುನೀತಾ ಬಡಕಂಬಿ, ಲತಾ ಭಜಂತ್ರಿ ಸೇರಿದಂತೆ ಪುರಸಭೆ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.