ದ್ರಾಕ್ಷಿ ಬೆಳೆ ಹಾನಿ ರೈತರ ಖಾತೆಗೆ ಪರಿಹಾರ ಹಣ ಶಾಸಕರ ಕರ್ಯಕ್ಕೆ ರೈತರು ಖುಷ್

ಕಾಗವಾಡ, 01: ಕಳೆದ ರ್ಷದ ಮಳೆಗಾಲದಲ್ಲಿ ಸಂಭವಿಸಿದ ಧಾರಾಕಾರ ಮಳೆಯ ಪರಿಣಾಮ ದ್ರಾಕ್ಷೆ ಬೆಳೆಗಳಿಗೆ ಸಂಭವಿಸಿದ ಹಾನಿ ಹಿನ್ನೆಲೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅವರ ವಿಶೇಷ ಪ್ರಯತ್ನದಿಂದ ಟಾಟಾ ಎಐಜಿ ವಿಮಾ ಕಂಪನಿಯ ಮೂಲಕ ಸುಮಾರು 22 ಕೋಟಿ ಪರಿಹಾರ ಅನುದಾನ ಮಂಜೂರುಗೊಂಡು, ಬೆಳೆಗಾರ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ.  

ಈ ಕಾರ್ಯಕ್ಕೆ ಸಂತೋಷ ವ್ಯಕ್ತಪಡಿಸಿರುವ ದ್ರಾಕ್ಷೆ ಬೆಳೆಗಾರರು, ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ. ರವಿವಾರ ದಿ. 29 ರಂದು ತಾಲೂಕಿನ ಉಗಾರ ಖರ್ದ ಪಟ್ಟಣದ ಶಾಸಕರ ಕಚೇರಿಯಲ್ಲಿ, ದ್ರಾಕ್ಷೆ ಬೆಳೆಗಾರರ ಸಮೂಹ ಶಾಸಕರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ರಾಜು ಕಾಗೆ ಮಾತನಾಡಿ, ರೈತರು ತೀವ್ರ ಪರಿಶ್ರಮದಿಂದ ಬೆಳೆಗಳನ್ನು ಬೆಳೆಯುತ್ತಾರೆ. ಪ್ರಕೃತಿ ವಿಕೋಪದಿಂದಾಗಿ ಅವರ ಬೆಳೆಗಳು ಹಾನಿಯಾಗಿರುವುದನ್ನು ಗಮನಿಸಿ, ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಸರ್ಕಾರದ ತೋಟಗಾರಿಕೆ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಇದರ ಗಂಭೀರತೆಯನ್ನು ಅರಿತು, ಟಾಟಾ ಎಐಜಿ ವಿಮಾ ಕಂಪನಿಯಿಂದ ರೂ. 22 ಕೋಟಿ ಪರಿಹಾರ ಮಂಜೂರು ಮಾಡಿಸಿದ್ದಾರೆ.ಈ ಪರಿಹಾರದ ಶೇಕಡಾ 90 ರಷ್ಟು ಮೊತ್ತವನ್ನು ಈಗಾಗಲೇ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಮುಂದಿನ ಹಂತದಲ್ಲಿ ಶೇಕಡಾ 100 ರಷ್ಟು ಪರಿಹಾರವನ್ನು ನೀಡುವಂತೆ ಸರ್ಕಾರದೊಂದಿಗೆ ಸಮಾಲೋಚನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ವಿರೋಧ ಪಕ್ಷದವರು ಯಾವುದೇ ಸ್ಪಷ್ಟ ಯೋಜನೆ ಇಲ್ಲದೆ, ಕೆಲವು ದ್ರಾಕ್ಷೆ ಬೆಳೆಗಾರರಿಗೆ ಪರಿಹಾರ ನೀಡಿದಂತೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಇಂತಹ ಸುಳ್ಳು ಪ್ರಚಾರವನ್ನು ಖಂಡಿಸುತ್ತೇನೆ. ಇದು ಜನರ ವಿಶ್ವಾಸ ಪಡೆದುಕೊಳ್ಳುವ ರಾಜಕೀಯ ಪ್ರಹಸನವಾಗಿದೆ ಎಂದು ಅವರು ಕಿಡಿಕಾರಿದರು.ಮಂಗಸೂಳಿ ದ್ರಾಕ್ಷಿ ಬೆಳೆಗಾರರ ಸಂಘದ ಸಂಚಾಲಕರಾದ ಚಿದಾನಂದ ಮಾಳಿ ನೇತೃತ್ವದಲ್ಲಿ ಶಾಸಕರನ್ನು ಸನ್ಮಾನಿಸಿ, ಬಳಿಕ ಚಿದಾನಂದ ಮಾಳಿ ಮಾತನಾಡಿ, ಕಳೆದ ರ್ಷ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಸಂಭವಿಸಿದ ನಷ್ಟಕ್ಕೆ ಶೇಕಡಾ 90 ರಷ್ಟು ಪರಿಹಾರವನ್ನು ಹೊಂದಿಕೊಡಲು ಶಾಸಕರು ಪ್ರಯತ್ನಿಸಿದ್ದಾರೆ. ಈ ಕಾರಣದಿಂದ ಎಲ್ಲ ರೈತರ ಪರವಾಗಿ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದು ಹೇಳಿದರು.  

ಜೊತೆಗೆ ಭವಿಷ್ಯದಲ್ಲಿ ವಿಮಾ ಕಂಪನಿಗಳು ಪ್ರತಿ ಹೆಕ್ಟೇರ್ ಕ್ಷೇತ್ರಕ್ಕೆ 5 ಲಕ್ಷ ರೂ. ವಿಮೆಗಾಗಿ ಪರಿಹಾರವನ್ನು ನೀಡುವಂತೆ ಮತ್ತು ನಾವು ಅದರ ಪ್ರೀಮಿಯಂ ಭರಿಸಲು ಸಿದ್ದರಿದ್ದೇವೆ ಎಂಬ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾಗವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೊಡೆ, ದ್ರಾಕ್ಷಿ ಬೆಳೆಗಾರರಾದ ಪಾಂಡುರಂಗ ಸುರ್ಯವಂಶಿ, ಪರಶುರಾಮ ಸಾವಂತ, ಸಂಜಯ ಸಮಜಗೆ, ಉದಯ ಪಾಟೋಳೆ, ಭಾಹುಸಾಹೇಬ ಸಮಜಗೆ, ಸುರೇಶ ಕುಂಬಾರ, ಬಂಡು ಕೋರೆ, ಚಂದ್ರಕಾಂತ ಮಾಳಿ, ರಾಮದೇವ ಬಜಂತ್ರಿ, ರಾಜೇಶ ಕುಟವಾಡೆ, ಮಹೇಶ್ ಪುಜಾರಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.