ಭಾರೀ ಭೂ ಕುಸಿತದ ಕಾರಣ ಪತ್ತೆ, ಮುನ್ಸೂಚನೆ ಕಡೆಗಣನೆ?


ಕೊಡಗು/ಬೆಂಗಳೂರು 23: ಭಾರತೀಯ ಹವಾಮಾನ ಇಲಾಖೆ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ್ದ ಮುನ್ಸೂಚನೆಯನ್ನು ಕಡೆಗಣಿಸಿದ್ದರ ಪರಿಣಾಮ ಕೊಡಗಿನಲ್ಲಿ ಮಳೆ, ಪ್ರವಾಹದಿಂದ ಹೆಚ್ಚಿನ ಹಾನಿ ಉಂಟಾಗಲು ಕಾರಣವಾಗಿದೆ ಎಂಬ ಅಂಶ ಇದೀಗ ಚಚರ್ೆಗೆ ಗ್ರಾಸವಾಗಿದೆ. 

ಕೊಡಗಿನಲ್ಲಿ ವರುಣನ ಆರ್ಭಟವಾಗುವ ಮುನ್ನ ಆಗಸ್ಟ್ 6ರಂದು ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ಇದು ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ಹೊಂದಿತ್ತು. ಅಲ್ಲದೇ ಜುಲೈ 9ರಂದು ಮಧ್ಯಾಹ್ನ 12ಗಂಟೆ 57 ನಿಮಿಷಕ್ಕೆ ಭೂಕಂಪನವಾಗಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯ ಸಕರ್ಾರದ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿತ್ತು ಎಂದು ಖಾಸಗಿ ಟಿವಿ ಚಾನೆಲ್ ವರದಿ ತಿಳಿಸಿದೆ. 

ಎರಡು ಭೂಕಂಪನಗಳು ಸುಮಾರು 10 ಕಿಲೋ ಮೀಟರ್ ವ್ಯಾಪ್ತಿವರೆಗೆ ಹಬ್ಬಿತ್ತು. ಇದರಿಂದಾಗಿ ಗುಡ್ಡದ ಮಣ್ಣು ಸಡಿಲವಾಗಿ ಭೂ ಕುಸಿತಕ್ಕೆ ಕಾರಣವಾಗಿದೆ ಎಂದು 

ಹೇಳಲಾಗಿದೆ. 

ತದನಂತರ ಸುರಿದ ಭಾರೀ ಮಳೆ, ಪ್ರವಾಹಕ್ಕೆ ಗುಡ್ಡ ಕುಸಿತು ಹೆಚ್ಚಿನ ಪ್ರಮಾಣದ ನಷ್ಟ, ಮನೆ ಕುಸಿತಕ್ಕೆ ಕಾರಣವಾಗಿದೆ ಎಂದು ವಿವರಿಸಿರುವ ವರದಿ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಇದ್ದಿದ್ದರೆ ಹಾನಿಯನ್ನು ತಡೆಯಬಹುದಾಗಿತ್ತು ಎಂದು ತಿಳಿಸಿದೆ.