ಲೋಕದರ್ಶನ ವರದಿ
ಗದಗ 10: ಗದಗ ಬೆಟಗೇರಿ ಅವಳಿ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ 11ನೇ ದಿನದ ಗಣೇಶ ಮೂತರ್ಿಗಳನ್ನು ಅನಂತಚತುರ್ದಶಿ ಹಿನ್ನೆಲೆಯಲ್ಲಿ 11ನೇ ದಿನದ ಬದಲಾಗಿ 12 ನೇ ದಿನ ದಿ. 13ರಂದು ವಿಸರ್ಜನೆ ಮಾಡಲು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ನಿರ್ಣಯ ಅಂಗೀಕರಿಸಿದೆ.
ಈ ಬಗ್ಗೆ ಇಂದಿಲ್ಲಿ ಸಾರ್ವಜನಿಕ ಗನೇಶೋತ್ಸವ ಮಹಾಮಂಡಳಿ ಅಧ್ಯಕ್ಷ ರಾಜೂ ಖಾನಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಬಗ್ಗೆ ಸವರ್ಾನುಮತದ ನಿರ್ಣಯ ಅಂಗೀಕರಿಸಲಾಯಿತು. ಮಾತನಾಡಿದ ರಾಜೂ ಖಾನಪ್ಪನವರ ಗಣೇಶನನ್ನು ಅನಂತಚತುರ್ದಶಿಯಂದು ವಿಸರ್ಜನೆ ಮಾಡಬಾರದೆಂದು ಧರ್ಮ ಸಂಹಿತೆಯಲ್ಲಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿನ 18 ಗಣೇಶೋತ್ಸವ ಮಂಡಳಿಗಳು ದಿ.13 ರಂದು ವಿಸಜರ್ಿಸಲು ನಿರ್ಧರಿಸಲಾಗಿದೆಯೆಂದು ಹೇಳಿದರು. ರಾಜೂ ಖಾನಪ್ಪನವರ ಹೇಳಿಕೆಯನ್ನು ಸಭೆಯಲ್ಲಿ ನೆರೆದಿದ್ದ ಎಲ್ಲ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಚಪ್ಪಾಳಿ ಮೂಲಕ ಒಕ್ಕೋರಲಿನಿಂದ ಸ್ವಾಗತಿಸಿದರು.
ಸಭೆಯಲ್ಲಿ ಮಹಾಮಂಡಲಿಯ ಶಂಕರ ಮುಳಗುಂದ, ಈರಣ್ಣ ಮುಳ್ಳಾಳ, ಕಿಶನ್ ಮೆರವಾಡೆ, ಅನೀಲ ಅಬ್ಬಿಗೇರಿ, ರಾಜೂ ಮಲ್ಲಾಡದ, ಅಜ್ಜಣ್ಣ ಮಲ್ಲಾಡದ, ನಾಲ್ವಾಡ ಗಲ್ಲಿ ಗಜಾನನೋತ್ಸವ ಸಮಿತಿ, ಬಸವೇಶ್ವರ ನಗರದ ಶಹಪೂರಪೇಟೆಯ ಗಜಾನನೋತ್ಸವ ಸಮಿತಿ, ಹೆಲ್ತಕ್ಯಾಂಪ್ ಗಜಾನನೋತ್ಸವ ಸಮಿತಿ, ಬೆಟಗೇರಿಯ ಮಾಸ್ತಾದೇವಿ ವಿನಾಯಕ ಸಮಿತಿ, ವಿದ್ಯಾರಣ್ಯ ಯುವಕ ಸಂಘದ ಗಜಾನನೋತ್ಸವ ಸಮಿತಿ, ಕೋಚ್ಚಿಗಲ್ಲಿ ಗಜಾನನ ಸಮಿತಿ, ವಿರೇಶ್ವರ ಪುಣ್ಯಾಶ್ರಮದ ಗಜಾನನೋತ್ಸವ ಸಮಿತಿ, ರಾಚೋಟೇಶ್ವರ ಗಜಾನನೋತ್ಸವ ಸಮಿತಿ, ಗಂಗಾಪೂರ ಪೇಟೆ ಯುವಕ ಮಂಡಳಿ, ವಿಶ್ವನಾಥ ಹಿರೇಮಠ ಗಜಾನನ ಯುವಕ ಮಂಡಲಿ, ಬೆಟಗೇರಿ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಿರಣ ಹಿರೇಮಠ ಸ್ವಾಗತಿಸಿದರು. ಸುನೀಲ ಮುಳ್ಳಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು