ಬಳ್ಳಾರಿ, ಅ 11: ಸಾರಿಗೆ ಬಸ್ ಹಾಗೂ ಸರಕು ವಾಹನ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಕೂಡ್ಲಿಗಿ ಹೊರವಲಯದ ಶಿವಪುರ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಅಪಘಾತ ಸಂಭವಿಸಿದ್ದು, ಚಾಲಕ ಪ್ರಕಾಶ್ (35) ನಾಗರಾಜ್ (60) ನಾಗಮ್ಮ (30) ಮೃತಪಟ್ಟ ದುದರ್ೆವಿಗಳು. ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಬಳ್ಳಾರಿಯ ಗುರು ಎಂಬುವವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಮಾರುಕಟ್ಟೆಯಲ್ಲಿ ಟ್ಯೊಮ್ಯಾಟೋ ವಿಲೇವಾರಿ ಮಾಡಿ ಸರಕು ವಾಹನದಲ್ಲಿ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.