ಉ.ಕ.ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಅಧಿಕಾರ ಸ್ವೀಕಾರ
ಕಾರವಾರ,ಫೆ.15 : ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.ಎಂ.ಪಿ, ಸೋಮವಾರ ಅಧಿಕಾರ ಸ್ವೀಕರಿಸಿರುತ್ತಾರೆ. ಮೂಲತಃ ತಮಿಳುನಾಡಿನ ಮಧುರೈ ನವರಾದ ಮುಲ್ಲೈ, 2013 ರ ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಪ್ರೋಬೆಷನರಿ ಅವಧಿಯನ್ನು ಬಳ್ಳಾಯರಿಯಲ್ಲಿ ಪೂರೈಸಿರುತ್ತಾರೆ. ಮುಂದೆ ಜಮಖಂಡಿ ಉಪವಿಭಾಗಾಧಿಕಾರಿಯಾಗಿ, ಎಂಡಿ, ಸ್ಮಾರ್ಟ ಸಿಟಿ ಬೆಳಗಾವಿ, ಕಮಿಷನರ್ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಎಂಡಿ ಸ್ಮಾರ್ಟ ಸಿಟಿ ಶಿವಮೊಗ್ಗ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ ರಾಮನಗರ ಹಾಗೂ ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.