ಪತ್ರಕರ್ತ ಹನುಮಂತು ಅಕಾಲಿಕ ನಿಧನಕ್ಕೆ ಡಿಕೆ ಸಹೋದರರ ಸಂತಾಪ

ಬೆಂಗಳೂರು, ಏ.21,ಖಾಸಗಿ ವಾಹಿನಿಯ ರಾಮನಗರ ವರದಿಗಾರ ಹನುಮಂತು ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.  ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿಕೆ ಸುರೇಶ್  ಸಂತಾಪ ಸೂಚಿಸಿದ್ದಾರೆ.ರಾಮನಗರದಲ್ಲಿ  ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ  ಕೇಳಿ ಆಘಾತವಾಯಿತು. ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆ.  ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ವರದಿ  ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ದುರ್ಮರಣ ಹೊಂದಿದ್ದಾರೆ ಎಂಬ ವಿಷಯ ಕೇಳಿ ತೀವ್ರ  ಬೇಸರವಾಗಿದೆ ಎಂದು ಹೇಳಿದ್ದಾರೆ. ಇನ್ನು  ಚಿಕ್ಕ ವಯಸ್ಸಿನವರಾಗಿದ್ದ ಹನುಮಂತು ಅವರ ಅಕಾಲಿಕ ಮರಣ ವಿಧಿ ಎಷ್ಟು ಕ್ರೂರಿ  ಎಂಬುದನ್ನು ತೋರಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಂಕಷ್ಟದ ಸಮಯವನ್ನು  ಎದುರಿಸಲು ಭಗವಂತ ಅವರ ಕುಟುಂಬ ಸದಸ್ಯರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ  ಶೋಕ ಸಂದೇಶದಲ್ಲಿ ಶಿವಕುಮಾರ್ ಹಾಗೂ ಸುರೇಶ್ ತಿಳಿಸಿದ್ದಾರೆ.