ಕೇಳುಗ ಪರಂಪರೆಯ ಶ್ರೇಯ ಆಕಾಶವಾಣಿಗೆ ಸಲ್ಲುತ್ತದೆ - ಡಾಕ್ಟರ್ ಆರ್.ಕೃಷ್ಣಪ್ರಸಾದ್
Credit for the legacy of listening goes to All India Radio - Dr. R. Krishnaprasad
ಧಾರವಾಡ 16: ಆಕಾಶವಾಣಿ, ಕಳೆದ 90 ವರ್ಷಗಳಲ್ಲಿ, ಕೇಳಿಸಿಕೊಳ್ಳುವ ವಿವೇಕ ಸಂಸ್ಕೃತಿ ಹಾಗೂ ಕೇಳುಗರ ದೊಡ್ಡ ಪರಂಪರೆಯನ್ನು ಬೆಳೆಸಿದೆ; ನಮ್ಮ ಕಲ್ಪನೆ ಹಾಗೂ ಆಲೋಚನೆಯನ್ನು, ಶ್ರಾವ್ಯ ಮಾಧ್ಯಮ ಹೃದಯಸ್ಪರ್ಶಿಯಾಗಿಸುತ್ತದೆ ಎಂದು, ಡಾಕ್ಟರ್ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ, ಡಾಕ್ಟರ್ ಆರ್. ಕೃಷ್ಣಪ್ರಸಾದ, ಶ್ಲಾಘಿಸಿದ್ದಾರೆ.
‘ಬಹುಜನ ಹಿತಾಯ, ಬಹುಜನ ಸುಖಾಯ ಧ್ಯೇಯದೊಂದಿಗೆ’, ಆಕಾಶವಾಣಿ, ಭಾರತೀಯ ಪ್ರಸಾರ ಸೇವೆ ಆರಂಭಿಸಿದ, ಸುವರ್ಣ ಘಳಿಗೆಯ, 90ನೇ ಹರ್ಷೋತ್ಸವ ಹಿನ್ನೆಲೆ, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ, ‘ಸಂಧ್ಯಾ ಸುಧೆ’ ಉದ್ಘಾಟಿಸಿ, ಅವರು ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ, ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ, ಮಂಜುಳಾ ಪುರಾಣಿಕ, ಜನಹಿತ ಹಾಗೂ ಜನಾಭಿಪ್ರಾಯ ಆಧಾರಿತ, ಕಾರ್ಯಕ್ರಮಗಳ ಕಣಜ ಎನಿಸಿರುವ ಆಕಾಶವಾಣಿಯನ್ನು, ನಾಡೋಜ ಪಾಟೀಲ ಪುಟ್ಟಪ್ಪನವರು, ಶ್ರೀಸಾಮಾನ್ಯರ ವಿಶ್ವವಿದ್ಯಾಲಯ ಎಂದು ಕರೆದಿದ್ದಾರೆ. ಆಕಾಶವಾಣಿ ನಿಜಾರ್ಥದಲ್ಲಿ, ಜನಸಾಮಾನ್ಯರ ದನಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಆಕಾಶವಾಣಿ ಧಾರವಾಡ ಕೇಂದ್ರದ, ತಾಂತ್ರಿಕ ವಿಭಾಗದ ಉಪ ಮಹಾ ನಿರ್ದೇಶಕ, ಅರುಣ ಪ್ರಭಾಕರ ಮಾತನಾಡಿ, ಆಕಾಶವಾಣಿ ದೇಶದ ಪ್ರತಿ ಮೂಲೆಗೂ ತಲುಪಿದ ಹೆಗ್ಗಳಿಕೆ ಹೊಂದಿದೆ. ಆಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ಪಾಡ್ಕಾಸ್ಟ್, ವೆಬ್ಸೈಟ್ ಹಾಗೂ ಆಪ್ಗಳಲ್ಲಿ, ಸರ್ವಸ್ಪರ್ಷಿಯಾಗಿದೆ ಎಂದರು.
ಸಂಗೀತ ವಿಭಾಗದ ಕಾರ್ಯಕ್ರಮ ನಿರ್ವಾಹಕ, ಕುಮಾರ ಅಗಡಿ ಸ್ವಾಗತಿಸಿದರು. ಹಿರಿಯ ಉದ್ಘೋಷಕಿ ಜಿ. ಸುರೇಖಾ ಸುರೇಶ ಪ್ರಾರ್ಥಿಸಿದರು. ಹಿರಿಯ ಉದ್ಘೋಷಕಿ ಮಾಯಾ ರಾಮನ್ ನಿರೂಪಿಸಿದರು. ಕಾರ್ಯಕ್ರಮ ನಿರ್ವಾಹಕಿ ಮಾಲಾ ಸಾಂಬ್ರಾಣಿ ವಂದಿಸಿದರು.
‘ಆಕಾಶವಾಣಿ ಅ90; ಸಂಧ್ಯಾ ಸುಧೆ’ ಸಂಗೀತ ಸಂಜೆಯಲ್ಲಿ, ದೃಷ್ಟಿ ವಿಶೇಷಚೇತನ ಯುವ ಪ್ರತಿಭೆ, ಆಕಾಶವಾಣಿಯ ಬಿ ಹೈ ಶ್ರೇಣಿ ಕಲಾವಿದೆ, ಕೃತಿಕಾ ಜಂಗಿನಮಠ, ಬಾನ್ಸುರಿ ವಾದನ ಪ್ರಸ್ತುತ ಪಡಿಸಿದರು. ಶರಣಕುಮಾರ ಗುತ್ತರಗಿ, ತಬಲಾ ಸಾಥ್ ನೀಡಿದರು.
ಆಕಾಶವಾಣಿಯ ಎ ಶ್ರೇಣಿ, ಶಾಸ್ತ್ರೀಯ ಸಂಗೀತ ಗಾಯಕ ರಘುನಂದನ ಭಟ್ ಶಾಸ್ತ್ರೀಯ ಸಂಗೀತ ಗಾಯನ ಪ್ರಸ್ತುತ ಪಡಿಸಿದರು. ರಘುನಂದನ ಗೋಪಾಲ ಹೂಗಾರ ತಬಲಾ ಹಾಗೂ ಅಶ್ವಿನ ವಾಲಾವಲಕರ ಹಾರ್ಮೋನಿಯಂ ಸಾಥ್ ನೀಡಿದರು.
ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ, ಪಂ. ಬಿ.ಎಸ್. ಮಠ, ಪಂ. ಶ್ರೀಪಾದ ಹೆಗಡೆ, ಕಂಪ್ಲಿ, ಪಂ. ವಾದಿರಾಜ ನಿಂಬರಗಿ, ವಿದುಷಿ ಅಕ್ಕಮಹಾದೇವಿ ಹಿರೇಮಠ, ಪಂ. ಕೈವಲ್ಯಕುಮಾರ ಗುರವ, ಪಂ. ಮಲ್ಲಿಕಾರ್ಜುನ ತರ್ಲಘಟ್ಟಿ, ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ವೀರಣ್ಣ ಪತ್ತಾರ, ಮಲ್ಲಿಕಾರ್ಜುನ ಚಿಕ್ಕಮಠ ಸೇರಿದಂತೆ, ಅನೇಕ ಗಣ್ಯರು, ವಿಶೇಷ ಆಹ್ವಾನಿತರು, ಶ್ರೋತೃಗಳು ಪಾಲ್ಗೊಂಡಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 