ತುಮಕೂರು, ಏ.30,ತುಮಕೂರು ಜಿಲ್ಲೆಯ ಕೆಎಚ್‌ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಿ-553 ವ್ಯಕ್ತಿಗೂ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್ ತಿಳಿಸಿದ್ದಾರೆ.ಮೃತ ಪಿ-535 ವ್ಯಕ್ತಿಯು ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಕುಟುಂಬ ಸದಸ್ಯರ 4 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 3 ಮಾದರಿಗಳು ನೆಗೆಟಿವ್ ಬಂದಿದ್ದು, ಮೃತ ವ್ಯಕ್ತಿಯ ಪತ್ನಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಐಸೋಲೇಶನ್ ಮಾಡಲಾಗಿದೆ. ಉಳಿದಂತೆ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಈಗಾಗಲೇ ಐಸೋಲೇಶನ್ ಮಾಡಲಾಗಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದು, ಅವರನ್ನು ಸಹ ಪರೀಕ್ಷೆಗೊಳಪಡಿಸಲಾಗು ವುದು ಎಂದು ಅವರು ತಿಳಿಸಿದ್ದಾರೆ.