ರಾಜ್ಯದಲ್ಲಿ 4 ಲಕ್ಷ ಜನರ ಕೋವಿಡ್ ಪರೀಕ್ಷೆ: ಡಾ.ಕೆ.ಸುಧಾಕರ್

ಬೆಂಗಳೂರು, ಜೂ.10 ರಾಜ್ಯದಲ್ಲಿ  ಇದುವರೆಗೆ 4 ಲಕ್ಷ ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದ ಚೇತರಿಕೆಯ ಪ್ರಮಾಣ ಶೇಕಡಾ 44ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಕರ್ನಾಟಕ ರಾಜ್ಯ ಮಂಗಳವಾರ 4 ಲಕ್ಷ ಕೋವಿಡ್‌ ಪರೀಕ್ಷೆಯ ಗಡಿ ದಾಟಿದೆ. ಇಲ್ಲಿಯವರೆಗೆ, ನಾವು ರಾಜ್ಯಾದ್ಯಂತ 71  ಕೊರೋನಾ ಪರೀಕ್ಷಾ ಪ್ರಯೋಗಾಲಯಗಳಲ್ಲಿ 4,00,257 ಮಾದರಿಗಳನ್ನು ಪರೀಕ್ಷೆ ನಡೆಸಿದ್ದೇವೆ. ಅದರಲ್ಲಿ ಶೇ. 1.4ರಷ್ಟು ಪಾಸಿಟಿವ್ ದರ ದಾಖಲಾಗಿದೆ. 2605 ಡಿಸ್ಚಾರ್ಜ್ ಮತ್ತು 5921 ಒಟ್ಟು ಸೋಂಕಿನ ಪ್ರಕರಣಗಳೊಂದಿಗೆ, ಕರ್ನಾಟಕದ ಚೇತರಿಕೆ ಪ್ರಮಾಣವು ಆರೋಗ್ಯಕರವಾದ ಶೇ. 44ರಷ್ಟರಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.