ದೇವರಹಿಪ್ಪರಗಿ 19: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಈರಗಂಟೆಪ್ಪ ಮಡಿವಾಳಪ್ಪ ಬೇಡರ(40)ಕೊಲೆಯಾದ ವ್ಯಕ್ತಿ. ಕಲಕೇರಿ ಗ್ರಾಮದಲ್ಲಿ ರವಿವಾರ ಬೆಳಗಿನ ಜಾವ ನಡೆದಿದೆ.
ಬೆಳಗಿನ ಜಾವ ಬಹಿರ್ದೆಸೆಗೆ ತೆರಳುತ್ತಿದ್ದರು. ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಗ್ರಾಮದ ಹೊರವಲಯದಲ್ಲಿ ಬರುತ್ತಿರುವಾಗ ಸುತ್ತುವರೆದು ಲಾಂಗು ಮಚ್ಚು ಮತ್ತು ಇತರೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆಗೈದು ಆತನ ತಂದೆಯನ್ನು ಕೊಲೆ ಮಾಡಲು ಮನೆಗೆ ಬಂದಾಗ ಘಟನೆಯ ಮಾಹಿತಿ ಜನರಿಗೆ ತಿಳಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ಬುದ್ಧಿವಾದ ಹೇಳಿದ್ದಕ್ಕೆ ಘಟನೆ ನಡೆದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.ತಲೆಯ ಭಾಗ, ಕುತ್ತಿಗೆ, ಸೇರಿದಂತೆ ದುಷ್ಕರ್ಮಿಗಳು, ಕೊಚ್ಚಿ ಕೊಲೆ ಬಳಿಕ ಮಾರಕಾಸ್ತ್ರಗಳಿಂದ ಗ್ರಾಮದ ಮನೆಗೆ ಬಂದು ಕೊಲೆಯಾದ ವ್ಯಕ್ತಿಯ ತಂದೆಯನ್ನು ಕೊಲ್ಲಲು ಪ್ರಯತ್ನಿಸಿದರು ಎಂದು ಮಾಹಿತಿ ತಿಳಿದು ಬಂದಿದೆ. ಒಟ್ಟು -7 ಜನ ಆರೋಪಿಗಳಲ್ಲಿ 5 ಜನ ಪೊಲೀಸ್ ಠಾಣೆಗೆ ಬಂದು ಶರಣರಾಗಿದ್ದು. ಇಬ್ಬರು ಪರಾರಿಯಾಗಿದ್ದು ಶೋಧಕಾಗಿ ಪೊಲೀಸ್ ತಂಡ ರಚನೆ ಮಾಡಲಾಗಿದೆ.ಗ್ರಾಮದ ದೇವಸ್ಥಾನದ ಹತ್ತಿರ ಕುಳಿತುಕೊಳ್ಳಲು ಆರೋಪಿಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ಹಾಗೂ ಹಳೆಯ ದ್ವೇಷಕ್ಕೆ ಹತ್ಯೆ ನಡೆದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪೊಲೀಸರಿಂದ ಮಾಹಿತಿ ಪಡೆದರು.
ಕೊಲೆಯಾದ ಸ್ಥಳಕ್ಕೆ ಕಲಕೇರಿ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮೃತ ದೇಹವನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಹೆಚ್.ಎಸ್. ಜಗದೀಶ, ಸಿಂದಗಿ ಸಿಪಿಐ ನಾನಾಗೌಡ ಆರ್ ಭೇಟಿ ನೀಡಿದ್ದಾರೆ.