ಬೆಳಗಾವಿ 19: ಶೀಘ್ರದಲ್ಲೇ 15 ಜನ ಶಾಸಕರು ದುಬೈ ಟೂರ್ ಹೋಗುವುದಾಗಿ ಹೇಳಿಕೆ ನೀಡಿದ್ದ ಶಾಸಕ ಆಸೀಫ್ ಸೇಠ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸೇಠ್ ಜತೆಗೆ ಅವರು ಮಾತನಾಡಿದರು. ಗನ್ ಮ್ಯಾನ್, ಪಿಎಗಳನ್ನು ವಾಹನದಿಂದ ಕೆಳಗಿಳಿಸಿ ಆಸೀಫ್ ಸೇಠ್ ಜೊತೆಗೆ ಮಾತನಾಡಿದರು. 15 ನಿಮಿಷಗಳ ಕಾಲ ಕಾರಲ್ಲೇ ಇಬ್ಬರು ನಾಯಕರು ಕುಳಿತುಕೊಂಡು ಚರ್ಚೆ ನಡೆಸಿದರು.