ತಾಲೂಕಾ ದೈಹಿಕ ಶಿಕ್ಷಕರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

Taluka Physical Education Association New Year Calendar release

ತಾಲೂಕಾ ದೈಹಿಕ ಶಿಕ್ಷಕರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ 

ಜಮಖಂಡಿ 20: ನಗರದ ಕ್ಷೇತ್ರ ಶಿಕ್ಷಣ ಇಲಾಖೆಯ ಆವರಣದಲ್ಲಿ ನಡೆದ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಮಾಡಿದರು.  

ದೈಹಿಕ ಶಿಕ್ಷಣ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಶಾಲೆಯಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆ ಅವಶ್ಯಕತೆ ಇರುವುದರಿಂದ ದೈಹಿಕ ಶಿಕ್ಷಣ ಶಿಕ್ಷರ ಅವಶ್ಯಕತೆ ಇದ್ದು.ಇಲಾಖೆಯ ಜೊತೆಗೆ ತಾವುಗಳು ಕೈ ಜೊಡಿಸಬೇಕು, ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಗಳಿಗೆ ಇಲಾಖೆ ನಿಮ್ಮ ಜೊತೆ ಯಾವತ್ತು ಇರುತ್ತೆ ಎಂದರು. 

ಪಂಚಾಕ್ಷರಿ ನಂದೇಶ, ನರಸಿಂಹ ಕಲ್ಲೊಳ್ಳಿ, ಸಿ.ಜಿ.ಕಡಕೋಳ, ಸುರೇಶ ಭೊಸಲೆ ಸದಾಶಿವ ಕುಂಬಾರ, ಬಸವರಾಜ ಅನಂತಪೂರ, ಎಮ್‌.ಎಸ್ ಹುದ್ದಾರ, ಬಾಹುಬಲಿ ನ್ಯಾಮಗೌಡ,ಮಹಾವೀರ ಜಮಖಂಡಿ, ವಿಜಯಮಹಾಂತೇಶ ಪಾಟೀಲ, ರಾಜು ಮಾಳಿ, ಶರಣಪ್ಪ ಅರೆಗೋಳ, ಈರಣ್ಣಾ ಕೋಷ್ಠಿ, ಶಾಂತಪ್ಪ ಕೇರುಟಗಿ, ಸುರೇಶ ಚಿನಗುಂಡ, ಬಸಯ್ಯಾ ಗೊಹೇಶ್ವರಮಠ, ವಿಜಯಲಕ್ಷ್ಮಿ ಪಾಟೀಲ, ಶೋಭಾ  ಕವಲಾಪೂರ, ಬಸಯ್ಯಾ ಚಿಕ್ಕುರಮಠ, ಮತ್ತು ಪದಾಧಿಕಾರಿಗಳು ಮತ್ತು ಸಿ ಆರ್ ಪಿ, ಬಿಆರ್‌ಪಿ ಸೇರಿದಂತೆ ಅನೇಕರು ಇದ್ದರು.