ಕೋವಿಡ್-19 ವ್ಯಾಪಕ: ಕಲಬುರಗಿಯಲ್ಲಿ ಸಾರ್ವತ್ರಿಕ ಸಮೀಕ್ಷೆ

ಕಲಬುರಗಿ, ಏ.  30,ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ( ಕೋವಿಡ್ - 19) ವ್ಯಾಪಕವಾಗಿ  ಹರಡುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ನಡೆಸುವಂತೆ  ಸರ್ಕಾರ ನಿರ್ದೇಶದನ್ವಯ ಕಲಬುರಗಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ಸಮೀಕ್ಷೆಯನ್ನು ಮತದಾರರ ಪಟ್ಟಿಯ ಆಧಾರದ ಮೇಲೆ ಪ್ರತಿ ಮತಗಟ್ಟೆ ಅಧಿಕಾರಿಯ  ವ್ಯಾಪ್ತಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಮಾಡಬೇಕು. ಸಮೀಕ್ಷೆ ಕಾರ್ಯವನ್ನು 3  ದಿನಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು ತಿಳಿಸಲಾಗಿದೆ.ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲು ಬೆಂಗಳೂರು  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕುಟುಂಬಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲು  ಹೆಚ್ಚುವರಿಯಾಗಿ ಪ್ರತಿಯೊಂದು ಮತಗಟ್ಟೆಯ ಒಬ್ಬ ಶಿಕ್ಷಕರನ್ನು ನೇಮಿಸಿಕೊಳ್ಳಲು  ನಿರ್ದೇಶಿಸಿದ್ದು, ಈ ಕುಟುಂಬಗಳ ಸಮೀಕ್ಷೆಗಾಗಿ ಪೂರ್ಣಗೊಳಿಸಲು ಶಾಲಾ ಶಿಕ್ಷಕರನ್ನು  ನಿಯೋಜಿಸಲಾಗಿರುತ್ತದೆ.  ನಿಯೋಜಿತ ಮತಗಟ್ಟೆ ಅಧಿಕಾರಿ , ಶಾಲಾ ಶಿಕ್ಷಕರು ತೀವ್ರ  ರೀತಿಯ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ರೋಗಿಯನ್ನು ಮುಂಚಿತವಾಗಿ ಗುರುತಿಸಿ ಕೊಳ್ಳಲು  ಮನೆ ಮನೆಗೆ ತೆರಳಿ ಕುಟುಂಬಗಳ ಸಮೀಕ್ಷೆ ನಡೆಸಬೇಕಾಗಿದೆ.
ಈ ಸಮೀಕ್ಷೆಯನ್ನು  ಕಲಬುರಗಿ ಜಿಲ್ಲೆಯಲ್ಲಿ ಪೂರ್ಣಗೊಳಿಸಬೇಕಿದ್ದು ಮಾಹಿತಿಯನ್ನು ನೇರವಾಗಿ ಸಂಗ್ರಹಿಸಲು  Health watch mobile app ಅನ್ನು  ಡೌನ್‌ಲೋಡ್ ಮಾಡಲು ಮೊಬೈಲ್ ಆ್ಯಪ್  ಅಭಿವೃದ್ಧಿಪಡಿಸಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿಯೂ ಒಂದು ವೇಳೆ ಕರ್ತವ್ಯಕ್ಕೆ ಯಾರಾದರೂ  ಅಡ್ಡಿ ಪಡಿಸಿದ್ದಲ್ಲಿ ಅವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ  ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಎಚ್ಚರಿಸಿದ್ದಾರೆ