ಮಹಾರಾಷ್ಟ್ರದಿಂದ ಬಂದ 7 ವಲಸೆ ಕಾರ್ಮಿಕರಿಗೆ ಕರೋನ ಸೋಂಕು

ಲಕ್ನೊ, ಮೇ, 2,ಮಹಾರಾಷ್ಟ್ರದಿಂದ ಇತ್ತೀಚೆಗೆ ಉತ್ತರಪ್ರದೇಶಕ್ಕೆ ವಾಪಸಾಗಿದ್ದ 7 ಜನ  ವಲಸೆ  ಕಾರ್ಮಿಕರಿಗೆ ಕರೋನ ಸೋಂಕು ಇರುವುದು  ದೃಢಪಟ್ಟಿದೆ.ದೇಶಾದ್ಯಂತ ಲಾಕ್ಡೌನ್ ನಡುವೆ ಅಲ್ಲಲ್ಲಿ ಸಿಲುಕಿರುವ ವಲಸಿಗರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ  ಸ್ಥಗಳಿಗೆ ತೆರಳುಲು   ಕೇಂದ್ರ ಸರಕಾರ ಅವಕಾಶ  ಮಾಡಿಕೊಟ್ಟ ಮರುದಿನವೇ ಈ ಪ್ರಕರಣ ವರದಿಯಾಗಿದೆ.  ಈ ವಾರಾರಂಭದಲ್ಲಿ ವಾಪಸಾಗಿದ್ದ ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಕಾರ್ಮಿಕರನ್ನು ಕಾಲೇಜೊಂದರಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದರು. ಇದೀಗ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕ್ವಾರಂಟೈನ್ ಸೆಂಟರ್ನ್ನು ಸ್ಯಾನಿಟೈಸ್ನಿಂದ ಸ್ವಚ್ಛಗೊಳಿಸಲಾಗಿದೆ. ಈ ಕಾರ್ಮಿಕರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ  ಎಂದೂ  ಅಧಿಕಾರಿಗಳು ತಿಳಿಸಿದ್ದಾರೆ.