ಬೆಂಗಳೂರು, ಏ 23,ಬೆಂಗಳೂರಿನ ಹೊಂಗಸಂದ್ರದ 9 ಕಾರ್ಮಿಕರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.ನಗರದ 30, 30, 22, 40,30,25,37,43 ಹಾಗೂ 24 ವರ್ಷದ ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇವರು ಕೊಳಚೆ ಪ್ರದೇಶದ ನಿವಾಸಿಗಳಾಗಿದ್ದು, ಇದರಿಂದ ಇನ್ನಷ್ಟು ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 443ಕ್ಕೇರಿಕೆಯಾಗಿದೆ. 17 ಜನರು ಸೋಂಕಿನಿಂದ ಮೃತಪಟ್ಟಿದ್ದು, 141 ಜನರು ಗುಣಮುಖರಾಗಿದ್ದಾರೆ.ವಿಜಯಪುರದಲ್ಲಿ ಮತ್ತೆ ಎರಡು ಪ್ರಕರಣ ಪತ್ತೆಯಾಗಿದೆ. 32 ವರ್ಷದ ಪುರುಷ ಮತ್ತು 25 ವರ್ಷದ ಯುವತಿ, ಹುಬ್ಬಳ್ಳಿ, ಧಾರವಾಡದ 30 ವರ್ಷದ ಮಹಿಳೆ, 13 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 78 ವರ್ಷದ ವೃದ್ಧೆ, ಮಂಡ್ಯದ 47 ಹಾಗೂ 28 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.