ಬೆಂಗಳೂರಿನ 11 ಮಂದಿಗೆ ಕೊರೋನಾ ಸೋಂಕು, ಸೊಂಕಿತರ ಸಂಖ್ಯೆ 463ಕ್ಕೇರಿಕೆ,

ಬೆಂಗಳೂರು, ಏ 24,ಬೆಂಗಳೂರಿನ ಪಾದರಾಯನಪುರದಲ್ಲಿ ಇತ್ತೀಚಿಗೆ ಗಲಭೆ ನಡೆಸಿದ್ದ ಐವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಜೊತೆಗೆ, ಹೊಂಗಸಂದ್ರದ ಬಿಹಾರ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದ ಐವರಲ್ಲಿ ಸೋಂಕು ಪತ್ತೆಯಾಗಿದೆ. ಪಾದರಾಯನಪುರನ 30,22,35,32, 23 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಅವರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಹೊಂಗಸಂದ್ರದ 26, 35,31,32,24 ವರ್ಷದ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ.

ಜೊತೆಗೆ, ಬೆಂಗಳೂರು ನಗರದ 49 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಗುಜರಾತ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 32 ವರ್ಷದ ವ್ಯಕ್ತಿ, ಬೆಳಗಾವಿ ರಾಯಭಾಗದ 10 ವರ್ಷದ ಬಾಲಕಿ, ಚಿಕ್ಕಬಳರ್ಳಾಪುರದ 39 ವರ್ಷದ ವ್ಯಕ್ತಿ, ಬಾಗಲಕೋಟೆ ಮುಧೋಳದ 28 ಹಾಗೂ ಜಮಖಂಡಿಯ 46 ವರ್ಷದ ಗಂಡು, ವಿಜಯಪುರದ 17 ವರ್ಷದ ಯುವಕ ಮತ್ತು ಬೆಳಗಾವಿ ರಾಯಭಾಗದ 15 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ, ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅತ್ತೆ 75 ವರ್ಷದ ದಕ್ಷಿಣ ಕನ್ನಡ ಬಂಟ್ವಾಳದ 75 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಪಾರ್ಶ್ವವಾಯು ಮತ್ತು ನ್ಯುಮೋನಿಯೋದಿಂದ ಬಳಲುತ್ತಿದ್ದರು ಎಂದು ಇಲಾಖೆ ಮಾಹಿತಿ ನೀಡಿದೆ. ಇದರಿಂದ ಒಂದೇ ದಿನ ಬೆಂಗಳೂರಿನಲ್ಲಿ 11 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 463ಕ್ಕೇರಿಕೆಯಾಗಿದೆ. 18 ಜನರು ಸೋಂಕಿನಿಂದ ಮೃತಪಟ್ಟಿದ್ದು, 150 ಜನರು ಗುಣಮುಖರಾಗಿದ್ದಾರೆ.