ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡಿ: ಖಾದ್ರಿ

ಲೋಕದರ್ಶನವರದಿ

ವಿಜಯಪುರ೨೯: ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡಬೇಕು. ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು ಎಂದು ಸಿಕ್ಯಾಬ ಶಿಕ್ಷಣ ಸಂಸ್ಥೆಯ ಚಾಂದಬೀಬೀ ಪ್ರೌಡಶಾಲೆಯ ಮುಖ್ಯಗುರು ಎಸ್ ಎಸ್ ಖಾದ್ರಿ ಕರೆ ನೀಡಿದರು.

ಮಂಗಳವಾರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ 2019-20 ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಅವರು, ಶಿಕ್ಷಣ ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯವಾಗಿದೆ. ಆಧನಿಕ ಯುಗದಲ್ಲಿ ಸ್ಪಧರ್ಾತ್ಮಕತೆ ಹೆಚ್ಚಾಗಿದ್ದು, ಪ್ರತಿಯೊಂದು ಶಾಲೆಗಳು ಮಕ್ಕಳ ಭವಿಷ್ಯತ್ತಿಗಾಗಿ ಶ್ರಮಿಸುತ್ತಿದ್ದು, ನಿರಂತರವಾಗಿ ಮಗು ಶಾಲೆಗೆ ಬಂದರೆ ಪಲಿತಾಂಶ ಉತ್ತಮ ಬರಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪಾಲಕರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. 

        ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆ ಹಾಗೂ ವಾರಣವನ್ನು ಶ್ರೀಂಘರಿಸಲಾಗಿತ್ತು. ಮಕ್ಕಳ ಆಗಮನವಾದ ನಂತರ ಅವರನ್ನು ಅತ್ಯಂತ ಆತ್ಮೀಯವಾಗಿ ಭರ ಮಾಡಿಕೊಳ್ಳಲಾಯಿತು ಸಿಹಿ ಹಂಚಿ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕರಾದ  ಶೈತಾಜ್ ಮುಲ್ಲಾ, ಮಾಂತಾ ಬಾಗೋಜಿಕೊಪ್ಪ, ಮಹಮ್ಮದಲಿ ನಬೀವಾಲೆ, ರಾಜೇಸಾಬ ತಿಕೋಟಿ, ಖಲೀಲ ಜಾಹಾಗಿರದಾರ ಸೇರಿದಂತೆ ಶಿಕ್ಷಕರು, ಸಿಬ್ಬಂಧಿ, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.