ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಅಥ್ಲೆಟಿಕ್ಸ್ ಪಂದ್ಯಾವಳಿಗಳಲ್ಲಿ ಬೆಳಗಾವಿ ಕ್ರೀಡಾ ವಸತಿ ನಿಲಯದ ಅಥ್ಲೆಟಿಕ್ಸ್ ಕ್ರೀಡಾಪಟುವಿನ ಸಾಧನೆ
ಬೆಳಗಾವಿ 01: ಓರಿಸ್ಸಾ ರಾಜ್ಯದ ಭುಬನೇಶ್ವರದಲ್ಲಿ ಕಳಿಂಗಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಇವರಿಂದ ಆಯೋಜಿಸಲಾದ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಬೆಳಗಾವಿ ಕ್ರೀಡಾ ವಸತಿ ನಿಲಯದ ಅಥ್ಲೆಟಿಕ್ಸ್ ಕ್ರೀಡಾಪಟುವಾದ ಕು. ಶಶಾಂಕ ಗಂಗಾಧರ ಪಾಟೀಲ ಇವರು ಜಾವಲಿನ್ ಥ್ರೋ ವಿಭಾಗದಲ್ಲಿ 74.58ಮೀ ದೂರ ಎಸೆದು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಬಿ. ಶ್ರೀನಿವಾಸ್ ಅವರು ಕ್ರೀಡಾಪಟುವಾದ ಶಶಾಂಕ ಗಂಗಾಧರ ಪಾಟೀಲ, ಅಥ್ಲೆಟಿಕ್ಸ್ ತರಬೇತಿದಾರರಾದ ಸಂಜೀವಕುಮಾರ ನಾಯಿಕ, ಫಿಟ್‌ನೆಸ್ ತರಬೇತಿದಾರರಾದ ಬಸವರಾಜ ಬೂಸನ್ನವರ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.