ನೂತನ ವರ್ಷದ ದಿನದರ್ಶಿಕೆ ಬಿಡುಗಡೆ
ಯಮಕನಮರಡಿ 31: ಸಮೀಪದ ಯಮಕನಮರಡಿ ಆರ್ ಸಿ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ದಿ.31 ರಂದು ನೂತನ ದಿನದರ್ಶೀಕೆ (ಕ್ಯಾಲೆಂಡರ್) ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ರವೀಂದ್ರ ಜಿಂಡ್ರಾಳಿ ಹಾಗೂ ಹತ್ತರಗಿ ಗ್ರಾ ಪಂ ಅಧ್ಯಕ್ಷ ಸಮೀರ್ ಬೇಪಾರಿ ಸಂಘದ ಸದ್ಯಸರಾದ ಬಸವರಾಜ ಹಿರೇಮಠ, ಬಸವರಾಜ ರುದ್ರಾಪುರಿ, ಸುರೇಶ ಆಡಿನವರ, ಸಮರ್ಥ ಜಿಂಡ್ರಾಳಿ ಕುಮಾರ ಜಿಂಡ್ರಾಳಿ, ಆನಂದ ಮಗದ್ದುಮ್, ಬಸ್ಸು ಕೋಟೆವಾಲೆ, ಕೆಂಪಣ್ಣಾ ಸಾರವಾಡಿ, ಬಸವರಾಜ ಆಡಿನವರ ಹಾಗೂ ಕಾರ್ಯದರ್ಶೀ ರಾಮ ಚೌಗಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.