ಸ್ತ್ರೀ ಶಕ್ತಿಯ ಕೊಡುಗೆ ಅಪಾರ: ಹೊಸಮಠ

ಲೋಕದರ್ಶನ ವರದಿ

ಗೋಕಾಕ 13: ಧರ್ಮಕ್ಕೆ ಕಂಠಕಪ್ರಾಯರಾದ ದುಷ್ಠ ಶಕ್ತಿಗಳು ತಮ್ಮ ರಾಕ್ಷಸಿ ಪ್ರವತರ್ಿಯೊಂದಿಗೆ ಧರ್ಮಯುತ ಬದುಕಿಗೆ ಸಂಚಕಾರ ತಂದಾಗ ಶಕ್ತಿಮಾತೆಯೇ ವಿವಿಧ ಅವತಾರಗಳಲ್ಲಿ ಆಗಮಿಸಿ ದುಷ್ಠ ಶಕ್ತಿಗಳನ್ನು ಧಮನಗೊಳಿಸಿದ ಅನೇಕ ಸಂದರ್ಭಗಳನ್ನು ಪುರಾಣ ಮತ್ತು ಇತಿಹಾಸದಲ್ಲಿ  ನೋಡಿದ್ದೇವೆ. ಧರ್ಮರಕ್ಷಣೆಯ ಕಾರ್ಯದಲ್ಲಿ ಸ್ತ್ರೀ ಶಕ್ತಿಯ ಕೊಡುಗೆ ಅಪಾರವಾಗಿದೆ ಎಂದು 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದ ಧರ್ಮದಶರ್ಿನಿ ಸುವಣರ್ಾ ಹೊಸಮಠ ಹೇಳಿದರು.

                 ದಸರಾ ನಿಮಿತ್ಯ 'ಜ್ಞಾನ ಮಂದಿರ' ಆಧ್ಯಾತ್ಮ ಕೇಂದ್ರದಲ್ಲಿ ಜರುಗಿದ ಆಧ್ಯಾತ್ಮ ಪ್ರವಚನದ ಚಿಂತನಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೆಣ್ಣು ಅಭಲೆಯಲ್ಲ. ಆದರೆ ಸಂಸ್ಕಾರಯುತ ನೈತಿಕ ಬದುಕಿನಿಂದ ಮಾತ್ರ ಹೆಣ್ಣು ಸಮಾಜದಲ್ಲಿ ತನ್ನದೇ ಆದ ಗೌರವ ಪಡೆಯಲು ಸಾಧ್ಯ ಎಂದು ಹೇಳಿದ ಅವರು ಹೆಣ್ಣುಮಕ್ಕಳ ನಡೆ-ನುಡಿ, ಆಚಾರ-ವಿಚಾರ ನೈತಿಕತೆಯಿಂದ ಕೂಡಿ ಸಂಸ್ಕಾರಯುತವಾಗಿರಬೇಕೆಂದು ಹೇಳಿದರು. ಆಧ್ಯಾತ್ಮ ಪ್ರವಚನ ನೀಡಿದ ಬಸವಾನಂದಸ್ವಾಮಿಗಳು ಗೋಸಾಂವಿ ಮಾತನಾಡಿ ಮಾನವ ಜನ್ಮ ಸಫಲವಾಗಲು ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಜಗದೊಡಯನಾದ ಪರಮಾತ್ಮನನ್ನು ಕಂಡು ನಮ್ಮ ಮನಸ್ಸು ಪರಮಾತ್ಮನ ಚಿಂತೆಯಲ್ಲಿರಬೇಕು. ಕಣ್ಣು ನೋಡುತ್ತಿರಲಿ, ಕೈಗಳು ಕೇಲಸ ಮಾಡುತ್ತಿರಲಿ ಆದರೆ ಒಳಗಿರುವ ಮನಸ್ಸು ಮಾತ್ರ ಪರಮಾತ್ಮನ ಚಿಂತನೆಯಲ್ಲಿರಬೇಕು. ಇದೇ ಶರಣರ, ಸಂತರ, ಜ್ಞಾನಿಗಳ ಮತ್ತು ಬಲ್ಲವರ ಸಂಪಾಧನೆ. ಸಂಸಾರದಲ್ಲಿದ್ದವರು ಚಿಂತೆಇಲ್ಲದೇ ಶಾಂತನಾಗಿರುವ, ಮುಕ್ತನಾಗಿರುವ ರೀತಿ ಮತ್ತು ದಾರಿ. ನೀರೊಳಗೆ ದೊಣಿ ಇದ್ದರೂ ದೊಣಿಗಳಿಗೆ ನೀರು ಇರಬಾರದು. ಅದೇ ರೀತಿ ನಾವು ಸಂಸಾರದೊಳಗೆ ಇದ್ದರೂ ಸಹ ಸಂಸಾರದ ಚಿಂತೆ ನಮ್ಮ ತಲೆಯೊಳಗೆ ಇರಬಾರದು. ತಲೆಯಲ್ಲಿ ಸುಖ-ಶಾಂತ ಸ್ವರೂಪನಾದ ಪರಮಾತ್ಮ ತುಂಬಿರಬೇಕು ಎಂದು ಹೇಳಿದರು.

                ಕಾರ್ಯಕ್ರಮದಲ್ಲಿ ಯುವ ರೈತ ಮುಖಂಡ ಪ್ರದೀಪ ಪೂಜಾರಿ, ಯೋಗ ಶಿಕ್ಷಕ ಅಶೋಕ ಹಿಂಡಿಹೊಳಿ, ಸೋಮಯ್ಯ ಹಿರೇಮಠ ಸ್ವಾಮಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.