ವಿನಾಯಿತಿಗಳ ನಡುವೆ ಕೋವಿಡ್‌ ನಿರ್ಬಂಧ ಮುಂದುವರಿಕೆ: ಜಿಲ್ಲಾಧಿಕಾರಿ‌ ಆರ್ .ಗಿರೀಶ್

ಹಾಸನ‌,  ಏ 3, ಕೋವಿದ್ 19 ಲಾಕ್‌ ಡೌನ್ ಅವಧಿಯನ್ನು ನಾಳೆಯಿಂದ ಮತ್ತೆ ಮೇ  17 ರತನಕ ವಿಸ್ತರಣೆ ಮಾಡಲಾಗಿದ್ದು, ಕೆಲವಿಂದು ವಿನಾಯಿತಿಗಳೊಂದಿಗೆ ನಿಷೇಧಾಜ್ಞೆ ಮಂದುವರೆಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳು  ಹಸಿರು ವಲಯದ ಜಿಲ್ಲೆಗಳಲ್ಲಿ ಕೆಲವೊಂದು ಸಡಿಲಿಕೆ ಮಾಡಿದ್ದು  ಅದರಂತೆ ಎಲ್ಲಾ ರೀತಿಯ ವ್ಯಾಪಾರ  ವಹಿವಾಟಿಗೆ ಅವಕಾಶ ನೀಡಲಾಗಿದೆ. ಆದರೆ ಸುರಕ್ಷತೆ  ದೃಷ್ಟಿಯಿಂದ ಈ ಮೊದಲಿನಂತೆ ವಾರದಲ್ಲಿ ಮೂರು ದಿನ ಮಾತ್ರ ಬೆಳಿಗ್ಗೆ 7ರಿಂದ ಸಂಜೆ  7ಗಂಟೆ ವರಗೆ ಮಾತ್ರ ಇದಕ್ಕೆ ಅನುಮತಿ  ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಅವರು  ತಿಳಿಸಿದರು. ಬಟ್ಟೆ ವ್ಯಾಪಾರ, ಚಿನ್ನಾಭರಣಗಳ ಖರೀದಿಗೂ ಅವಕಾಶ ಇದೆ.ನಿರ್ಬಂಧ ‌ಸಡಿಲಿಕೆ ವೇಳೆ ಮಾಸ್ಕ್ ಧರಿಸುವುದು, ಸಾಮಾಜಿಕ‌ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ನಿರ್ಲಕ್ಷ್ಯ ತೋರುವ ಸಾರ್ವಜನಿಕರು ಅಂಗಡಿ ಮಾಲಿಕರ ವಿರುದ್ದ ದಂಡ ವಿಧಿಸಿ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಲಾಕ್  ಡೌನ್ ನಿರ್ಬಂಧ ಸಡಿಲಿಸಲಾಗಿದೆ ಆದರೆ  ಕೊರೋನಾ ಸೊಂಕು ದೂರಾಗಿಲ್ಲ. ಈಗ ಅಂತರ್ ರಾಜ್ಯ  ಅಂತರ  ಜಿಲ್ಲಾ ಸಂಚಾರಕ್ಕೆ  ಅವಕಾಶ ನೀಡಿರುವುದರಿಂದ ಸೋಂಕು ಹರಡುವ ಸಾಧ್ಯತೆ ಇನ್ನಷ್ಟು  ಹೆಚ್ಚಿದ್ದು ಇದರಿಂದ ಮೊದಲಿಗಿಂದ ಗರಿಷ್ಠ ಜಾಗೃತಿ ವಹಿಸುವುದು ಅಗತ್ಯ ಎಂದು  ಜಿಲ್ಲಾಧಿಕಾರಿ ಅರ್ ಗಿರಿಶ್ ಹೇಳಿದರು.ಅನುಮತಿ  ಪಡೆದ ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಅಲ್ಲದೆ  ನಾಳೆಯಿಂದ ಶೇ 50 ರಷ್ಟು  ನಗರ  ಸಾರಿಗೆ ಬಸ್ ಗಳು‌ ಮತ್ತು ಅಂತರ ತಾಲ್ಲೂಕು ಬಸ್ ಗಳ ಸಂಚಾರ ಪ್ರಾರಂಭವಾಗಲಿದೆ ಅದರಲ್ಲಿ  ಒಮ್ಮೆಗೆ 25  ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗುವುದು ಎಂದು ಅವರು  ಹೇಳಿದರು.
ಆಟೋ ಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ.  ಧಾರ್ಮಿಕ ಸ್ಥಳದಲ್ಲಿ ದೈನಂದಿನ  ಧಾರ್ಮಿಕ ಪೂಜಾ  ವಿಧಿವಿಧಾನ ಮಾಡಲು ಮಾತ್ರ ಅವಕಾಶ ಇದ್ದು, ಸಾರ್ವಜನಿಕರು ಗುಂಪು ಸೇರಲು ನಿಷೇಧ ಇರುತ್ತದೆ.  ವಿವಾಹದ ಸಂದರ್ಭದಲ್ಲಿ 50 ಮಂದಿಗೆ ಅವಕಾಶ ಇದ್ದು ತಹಶಿಲ್ದಾರರ ರಿಂದ‌ ಮೊದಲೇ ಅನುಮತಿ ಪಡೆಯಬೇಕು ಎಂದು ಅವರು ತಿಳಿಸುದರುMSIL  ಮತ್ತು CL 2 ಪರವಾನಗಿ ಹೊಂದಿರುವ  ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ  ಅನುಮತಿ  ನೀಡಲಾಗಿದ್ದು ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಅವಕಾಶವಿದೆ. ಆದರೆ  ಸಾರ್ವಜನಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ  ತಿಳಿಸಿದರು.ಮಾಸ್ಕ್ ಇಲ್ಲದೇ ಓಡಾಟಕ್ಕೆ  ದಂಡ ವಿಧಿಸಲಾಗುವುದು. ವ್ಯಾಪಾರ ಮಳಿಗೆಗಳ ಮಾಲಿಕರು ಆರೋಗ್ಯ ಆ್ಯಪ್ ಬಳಸದಿದ್ದರೂ ದಂಡ ವಿಧಿಸಲಾಗುತ್ತದೆ.  ಇತರೇ  ರಾಜ್ಯದಿಂದ ಬರುವವರು ಸೇವಾ ಸಿಂಧುವಿನಲ್ಲಿ ನೋಂದಾಯಿಸಿಕೊಂಡು ಬರಬೇಕು. ಎಲ್ಲರ  ಆರೋಗ್ಯ ತಪಾಸಣೆ ನಡೆಸಿ ರೋಗ ಲಕ್ಷಣ ಇಲ್ಲದೆ ಇರುವವರನ್ನು ಹೋಂ ಕ್ವಾರಂಟೈನ್ ನಲ್ಲಿ  ಇಡಲಾಗುವುದು. ರೋಗ ಲಕ್ಷಣಗಳು ಇದ್ದವರನ್ನು ಅಸ್ಪತ್ರೆ ವಾರ್ಡ್ನಲ್ಲಿ ಇರಿಸಲಾಗುವುದು  ಎಂದು  ಆರ್ .ಗಿರೀಶ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ  ಮಾತನಾಡಿ, ಪ್ರತಿ‌  ಅಂಗಡಿ,ವಾಣಿಜ್ಯ ಮಳಿಗೆಗಳಲ್ಲಿ ಸಿ.ಸಿ ಟಿ.ವಿ ಅಳವಡಿಕೆ ಕಡ್ಡಾಯ. ಸಾಮಾಜಿಕ ಅಂತರ  ಕಾಯ್ದುಕೊಳ್ಳದಿದ್ದರೆ ಸಿಸಿ ಟಿವಿ ದೃಶ್ಯ ಆಧರಿಸಿ ತಪ್ಪಿತಸ್ಥ ರ ವಿರುದ್ಧ ಕ್ರಮ ಕೈಗೊಳ್ಳಲಾಗಿವುದು. ಅಳವಡಸದೇ ಇದ್ದರೆ ಕೇವಲ ಅಂಗಡಿ ಮಾಲಿಕರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು ಹೊಟೆಲ್ ಗಳಲ್ಲಿ ಪಾರ್ಸಲ್  ಗೆ ಮಾತ್ರ ಅವಕಾಶ ಇದೆ. ಟೀ ಕೂಡ ಸ್ಥಳದಲ್ಲಿ ಕುಡಿಯಲು ನೀಡುವಂತಲ್ಲ ಎಂದು ಅವರು  ಹೇಳಿದರು‌. ಜಿಲ್ಲಾ ಪಂಚಾಯತ್ ಸಿ.ಇ.ಒ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ  ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.