ಕಾರ್ಮಿಕನ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ಮುಖಂಡರು
ಶಿಗ್ಗಾವಿ 04 : ಪುರಸಭೆ ನೇರ ಗುತ್ತಿಗೆ ಕಾರ್ಮಿಕ ಪರಶುರಾಮ ಕಸ ವಿಲೇವಾರಿ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಲಗೈ ಬೆರಳಿಗೆ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಚಿಕಿತ್ಸೆ ನೀಡಿ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡಿರುವ ಗಾಯಾಳನ್ನು ಭೇಟಿ ಮಾಡಿ ಧೈರ್ಯ ತುಂಬಿದ ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ, ಪುರಸಭೆ ನಾಮ ನಿರ್ದೇಶಕ ಸದಸ್ಯರುಗಳಾದ ಪರವೀಜ ಮುಲ್ಲಾ, ಚಂದ್ರು ಕೊಡ್ಲಿವಾಡ, ಸಾಧಿಕ್ ಮೊಗಲಲ್ಲಿ ಪುರಸಭೆಯ ಸ್ಪಂದನೆ ಕುರಿತು ಕೇಳಿದಾಗ ಗಾಯಾಳು ಮುಖ್ಯಾಧಿಕಾರಿಗೆ ಭೇಟಿ ನೀಡಿರುವ ಬಗ್ಗೆ ತಿಳಿಸಿದರು. ಕಾರ್ಮಿಕನಿಗೆ ಸಹಾಯ ಮಾಡಬೇಕೆಂದು ಮುಖ್ಯಾಧಿಕಾರಿ ಮತ್ತು ಆಡಳಿತ ಮಂಡಳಿಗೆ ನಾಮ ನಿರ್ದೇಶನ ಸದಸ್ಯರುಗಳು ಆಗ್ರಹ ಮಾಡಿದ್ದಾರೆ.