ಗದಗ: ಡೆಂಗ್ಯೂ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅವಶ್ಯ

ಗದಗ 26: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕ ಪಂಚಾಯತ್, ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ  ಗದಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ರೆಹಮತ್ ನಗರ, ಎಚ್ ವಿ ಕುರಡಗಿ ಪ್ರೌಢಶಾಲೆ ಒಕ್ಕಲಗೇರಿ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ನಿಮಿತ್ಯ ಜನಜಾಗೃತಿ ಜಾಥಾ ಜರುಗಿತು. 

ಜಾಥಾ ಕಾರ್ಯಕ್ರಮಕ್ಕೆ ಎಸ್ ಪಿ ಬಳಿಗಾರ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಗದಗ, ಹಾಗೂ ಎಸ್ ಜಿ ಸಲಗೇರಿ ಸದಸ್ಯ ಕಾರ್ಯದಶರ್ಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ ಇವರುಗಳು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಅಧ್ಯಕ್ಷರು ಜಿಲ್ಲಾ ಪಂಚಾಯತ್ ಗದಗ ರವರು ಡೆಂಗ್ಯೂ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅವಶ್ಯ ನೀರಿನ ಸರಿಯಾದ ನಿರ್ವಹಣೆ, ಸೊಳ್ಳೆ ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ಘನತ್ಯಾಜ್ಯ ವಸ್ತುಗಳ ಸರಿಯಾದ ವಿಲೇವಾರಿ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಡೆಂಗ್ಯೂ ಜ್ವರ ಹರಡದಂತೆ ತಡೆಯಬಹುದು ಎಂದು ಹೇಳಿದರು.

ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ರವರು ಜಿಲ್ಲೆಯಲ್ಲಿ ಜೂನ್ ತಿಂಗಳ ಕೊನೆವರೆಗೆ 30 ಡೆಂಗ್ಯೂ, 61 ಚಿಕೂನ್ಗುನ್ಯಾ ಮತ್ತು 36 ಮಲೇರಿಯಾ ಪ್ರಕರಣಗಳು ವರದಿಯಾಗಿರುತ್ತವೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೀಟಜನ್ಯ ರೋಗಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿರುತ್ತದೆ ಎಂದು ತಿಳಿಸಿದರು.

ಡಾ. ಅರುಂಧತಿ ಕುಲಕರ್ಣಿ  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಗದಗ ರವರು ಪ್ರತಿ ವರ್ಷ ಜುಲೈ ತಿಂಗಳಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ ಈ ರೋಗವು ವೈರಸ್ನಿಂದ ಉಂಟಾಗುವ ಖಾಯಿಲೆಯಾಗಿದೆ ಈ ರೋಗಕ್ಕೆ ನಿರ್ದಿಷ್ಠ ಚಿಕಿತ್ಸೆ ಹಾಗೂ ಲಸಿಕೆ ಇರದ ಕಾರಣ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಇದು ಸೊಂಕು ಹೊಂದಿದ ಈಡೀಸ್ ಇಜಿಪ್ಟೈ ಸೊಳ್ಳೆ ಕಚ್ಚುವದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಆದ್ದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಛತೆ ಕಾಪಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕು, ಯಾವುದೇ ಜ್ವರ ಕಂಡು ಬಂದ ಕೂಡಲೆ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆಯಲು ತಿಳಿಸಿದರು.

ಜಾಥಾ ಕಾರ್ಯಕ್ರಮದಲ್ಲಿ ಶಕುಂತಲಾ ರವೀಂದ್ರನಾಥ ಮೂಲಿಮನಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್ ಗದಗ, ವಾಸಣ್ಣ ಕೆ ಕುರಡಗಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಜಿಲ್ಲಾ ಪಂಚಾಯತ್ ಗದಗ, ಡಾ. ಎಸ್ ಸಿ ಬಸರೀಗಿಡದ ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳು,     ಡಾ. ಎಸ್ ಎಸ್ ನೀಲಗುಂದ ತಾಲೂಕಾ ಆರೋಗ್ಯ ಅಧಿಕಾರಿಗಳು ಗದಗ, ಡಾ. ಎಸ್ ಎಮ್ ಓಣಿ, ಡಾ. ಮೆಹರುನ್ನಿಸಾ ಮುಲ್ಲಾ ಸುರೇಶ ಎಚ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಅನ್ನಪೂಣರ್ಾ ಶೆಟ್ಟರ, ಸಹಾಯಕ ಕೀಟಶಾಸ್ತ್ರಜ್ಞರು, ಎಚ್ ವಿ ಕುರಡಗಿ ಪ್ರೌಢ ಶಾಲೆ ಶಿಕ್ಷಕರು, ಶ್ರೀಯುತರುಗಳಾದ ಬಸವರಾಜ ಲಾಲಗಟ್ಟಿ, ಅಜಯ್ಕುಮಾರ ಕಲಾಲ, ಆರ್ ಕೆ ಚಿಲ್ಲಾಳ, ಎಸ್ ಸಿ ಕೋಳಿವಾಡ, ಆಯ್ ಎಸ್ ಚಲ್ಮಿ, ಎಂ ಎಚ್ ಕದಾಂಪೂರ, ವಾಯ್ ವಾಯ್ ಹಕ್ಕಿ, ಎಸ್ ಎನ್ ಲಿಂಗದಾಳ, ಸಂದೀಪ ವಿಠಲಾಪೂರ, ಆರ್ ಸಿ ಹಿರೇಹಾಳ, ಏಕನಾಥ ಪಾಟೀಲ್ ಪ್ರಭು ಹೊನಗುಡಿ, ಬಿ ಸಿ ಹಿರೇಹಾಳ, ಎನ್ ಎಮ್ ಪಾಟೀಲ್, ಬಿ ಎಸ್ ಸೋಮಗೊಂಡ, ನಜೀರ, ಎಮ್ ಎಮ್ ತಳವಾರ, ಆರ್ ವಿ ಹುಲ್ಲೂರ, ಮಲ್ಲಮ್ಮ ಹೆಬ್ಬಾಳ, ಆರೋಗ್ಯ ಇಲಾಖೆಯ ಸಿಬ್ಬಂದಿ, ನಗರ ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಜಾಥಾವು ಪ್ರೌಢ ಶಾಲೆಯ ಆವರಣದಿಂದ ವಿಜಯನಗರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಥಾ ಉದ್ದಕ್ಕೂ ಡೆಂಗ್ಯೂ ನಿಯಂತ್ರಣದ ಕುರಿತು ಧ್ವನಿ ವರ್ಧಕದ ಮೂಲಕ ಘೋಷಣೆಗಳನ್ನು ಕೂಗುತ್ತ ಅರಿವು ಮೂಡಿಸಿತು. ಜಾಥಾದಲ್ಲಿ ವಿದ್ಯಾರ್ಥಿಗಳು ವಿವಿಧ ಘೋಷಣೆಗಳ ಫಲಕಗಳನ್ನುಹಿಡಿದುಕೊಂಡು ಮಾರ್ಗದುದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಜನಜಾಗೃತಿ ಮೂಡಿಸಲಾಯಿತು.