ಮುಂಬೈ, ಜ 31,ಬಾಲಿವುಡ್ ನಲ್ಲಿ ಕೆಲ ವರ್ಷಗಳಿಂದ ಸಾಧನೆಮಾಡಿದ ಕ್ರೀಡಾಪಟುಗಳ ಜೀವನಾಧಾರಿತ ಚಿತ್ರಗಳು ಹೊರಬರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನವಾಬ್ ಸೈಫ್ ಅಲಿ ಖಾನ್ ಮಾತನಾಡಿ, ತಮ್ಮ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಜೀವನಾಧಾರಿತ ಚಿತ್ರ ಹೊರತರುವುದು ಬಲು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ 1961 ರಿಂದ 1975 ರವರೆಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು.ತಮ್ಮ ತಂದೆ ಮನ್ಸೂರ್ ಅವರ ಕುರಿತಾಗಿ ಬಯೋಪಿಕ್ ಬರೆಯುವುದಾಗಲಿ ಅಥವಾ ಅವರ ಜೀವನಾಧಾರಿತ ಚಿತ್ರ ಹೊರತರಲು ತಮಗೆ ಇಷ್ಟವಿದೆಯಾ ಎಂದು ಸೈಫ್ ಅಲಿ ಖಾನ್ ಅವರಿಗೆ ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಸೈಫ್, ಜೀವಾನಾಧಾರಿತ ಪುಸ್ತಕ ಬರೆಯುವುದು ,ಜೀವನಾಧಾರಿತ ಚಿತ್ರ ಹೊರತರುವುದು ಎರಡು ಬೇರೆ ವಿಚಾರ. ನಮ್ಮ ತಂದೆಯ ಕುರಿತಾಗಿ ಚಿತ್ರ ಹೊರತರುವುದು ಬಲು ಕಷ್ಟದ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಂದೆ ನಿಧನಹೊಂದಿದ್ದಾಗ ಅನೇಕ ಅರ್ಟಿಕಲ್, ಸ್ಟೋರಿಗಳನ್ನು ಬರೆಯಲಾಗಿತ್ತು. ಒಬ್ಬ ವ್ಯಕ್ತಿ ಅವರ ಬಗ್ಗೆ ಪುಸ್ತಕ ಬರೆಯುತ್ತಿದ್ದರು. ಆದರೆ, ಆ ಪುಸ್ತಕ ನಮ್ಮ ತಾಯಿ ಶರ್ಮಿಲಾ ಟ್ಯಾಗೋರ್ ಅವರಿಗೆ ಅಷ್ಟು ಹಿಡಿಸಲಿಲ್ಲ ಎಂದು ಸ್ಮರಿಸಿಕೊಂಡರು. ತಂದೆಯ ಕುರಿತಾದ ಟಿಪಿಕಲ್ ಬಾಲಿವುಡ್ ಚಿತ್ರದಲ್ಲಿ ತಾವು ನಟಿಸಲು ಸಾಧ್ಯವಿಲ್ಲ. ಅವರ ಬಗ್ಗೆ ಅದ್ಭುತ ಚಿತ್ರ ಮಾಡಬಹುದು. ತಮಗೆ ಇಷ್ಟವಾಗುವರೆಗೂ ಚಿತ್ರಕ್ಕೆ ತಾವು ಸಮ್ಮತಿ ಸೂಚಿಸುವುದಿಲ್ಲ ಎಂದು ತಿಳಿಸಿದರು. ಹಿಂದಿ ಚಿತ್ರರಂಗದಲ್ಲಿ ಅವರ ಕುರಿತಾದ ಚಿತ್ರವೊಂದು ತೆರೆಗೆ ಬರಲಿದೆ ಎಂದು ನನಗಿಸುವುದಿಲ್ಲ. ಏಕೆಂದರೆ ನಮ್ಮ ತಂದೆ ಇಂಟರ್ ನ್ಯಾಶನಲ್ ಪರ್ಸನಾಲಿಟಿ ಹೊಂದಿದ್ದರು ಎಂದು ಸೈಫ್ ತಿಳಿಸಿದರು .