ಲೋಕದರ್ಶನ ವರದಿ
ಗಜೇಂದ್ರಗಡ : ತೋಗಟವೀರ ಕ್ಷತ್ರಿಯ ಸಮಾಜವು ಚೌಡೇಶ್ವರಿ ದೇವಿಯ ಜ್ಯೋತಿ ಉತ್ಸವದ ಅಂಗವಾಗಿ ನೂತನ ಪಾಲಕಿಯನ್ನು ನಗರದ ಎಪಿಎಂಸಿ ಆವರಣದ ಗಜಾನನ ದೇವಾಸ್ಥಾದಿಂದ ಹೋರಟು ಪಾಲಕಿ ಮೇರವಣಿಗಿಯು ಗಜೇಂದ್ರಗಡದ ಪ್ರಮುಖ ಬೀದಿಗಳಲ್ಲಿ ಆಯ್ದು ಸರಿ ಸುಮಾರು 07 ಘಂಟೆಯ ಹೊತ್ತಿಗೆ ಚೌಡೇಶ್ವರಿ ದೇವಾಲಯ ತಲುಪಿತು.
ದಿವ್ಯ ಜ್ಞಾನಾನಂದಗಿರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶಾಸಕ ಕೆಜಿ ಬಂಡಿ ಕುಂಭ ಮೇಳಕ್ಕೆ ಚಾಲನೆಯನ್ನು ನೀಡಿ ಗಜೇಂದ್ರಗಡದಲ್ಲಿಯೇ ಚಿಕ್ಕ ಸಮಾಜವಾಗಿದ್ದರು ಅತ್ಯಂತ ಬೃಹತ್ ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರಲ್ಲದೆ ಸಮಾದ ಸವರ್ಾಭಿಮುಖವಾಗಿ ಬೆಳವಣಿಗೆ ಹೊಂದಬೇಕು ಎಂದು ಆಶಿಸಿದರು.
ನಂತರ ಪಾಲಕಿಯೊಂದಿಗೆ ಕುಂಭ ಮೇಳ, ಛತ್ರ ಚಾಮರ, ಭಜನೆ, ಡೊಳ್ಳು ಕುಣಿತಗಳು ಸಾಗಿಬಂದವು. ಸಮಾಜದಲ್ಲಿ ಸೇವೆಗೈದ ಹಿರಿಯರನ್ನು, ನೌಕರಸ್ಥರನ್ನು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೂ ವಿದ್ಯಾಥರ್ಿನಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಯನಾಡುತ್ತಾ ಸುಮಾರು 38 ವರ್ಷಗಳ ಜ್ಯೋತಿ ಮಹೋತ್ಸವನ್ನ ಹಿರಿಯರ ಸಮ್ಮುಖದಲ್ಲಿ ನೆರವೇರಿಸುತ್ತಾ ಬಂದ ಇತಿಹಾಸ ನಮ್ಮದಾಗಿದೆ ದೇವಾಸ್ಥಾನದ ಗೋಪುರವು 1929 ರಲ್ಲಿ ಪ್ರಾರಂಭವಾಗಿ ಸುಮಾರು ಆರು ವರ್ಷದಲ್ಲಿ ಪೂರ್ಣಗೊಂಡಿತು ಅದಕ್ಕೆಲ್ಲ ಸಮಾಜದ ಎಲ್ಲ ಯುವ ನಾಗರಿಕ ಮಿತ್ರರ ಶ್ರಮ ದೊಡ್ಡದಿದೆ ಎಂದರೆ ತಪ್ಪಾಗಲಾರದು ಎಂದು ಕೃಷ್ಣ ವಾಸಪ್ಪ ಮ್ಯಾಕಲ್ ಹೇಳಿದರು.
ನಿರ್ಮಲಾ ಸಂಚಾಲಿ ಅವರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಸ್ವಾಗತ ಪುಷ್ಪಾರ್ಪಣೆಯನ್ನ ರಾಘವೇಂದ್ರ ಜಿ ಮ್ಯಾಕಲರವರೊಂದಿಗೆ ನಿರೂಪಣೆ ಕಾರ್ಯವನ್ನ ಮಂಜುನಾಥ ಚಿನ್ನೂರ ಹಾಗೂ ಶ್ರೀನಿವಾಸ ನೀಲೂರರವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಅಮರೇಶ ಬಳಗೇರ, ಅಶೋಕ ವನ್ನಾಲ, ವಿಶ್ವನಾಥ ಮೇಘರಾಜ, ಪ್ರಭು ಶೆಲ್ಲೇದ, ಕೊಟ್ರೇಶ ಚಿಲಕಾ, ಕೃಷ್ಣ ವಾಸಪ್ಪ ಮ್ಯಾಕಲ್, ಬಾಸ್ಕರಾವ್ ರಾಯಬಾಗಿ, ನಾರಾಯಣಪ್ಪ ಕಂದಿಕೊಂಡ, ಡಾ. ಆರ್ ಎಂ ಜೀರೆ, ಮಲ್ಲಿಕಾಜರ್ುನ ಕವಡಿಮಟ್ಟಿ, ಉಮಾ ಮ್ಯಾಕಲ್, ಶಾರದಾ ಉಕ್ಕಿಸಲ, ಲಕ್ಷ್ಮಣಪ್ಪ ಮ್ಯಾಕಲ್, ಪುರಂದರ್ ಪುಲಗಟ್ಟಿ, ಅಮರೇಶ ಚಾಗಿ, ಶಂಕರ ಬಂಗಾರಿ, ಶರಣಯ್ಯ ಸರಗಣಚಾರ್ಯ, ರವೀಂದ್ರ ಕವಡಿಮಟ್ಟಿ, ಶರಣಬಸಪ್ಪ ಮಾಳಗಿ, ಶಿವಶಂಕರಪ್ಪ ಕೊಪ್ಪರದ, ಉಮೇಶ ನಾವಡೆಯಬರು ಉಪಸ್ಥಿತಿಯಲ್ಲಿ ಕಾರ್ಯಕ್ರಮದ ವಂದನಾರ್ಪಣೆಯನ್ನ ಮಂಜುನಾಥ ಯರಗೇರಿವರು ನೆರವೇರಿಸಿದರು.