ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು: ಡಿಡಿಪಿಐ ನಾಗೂರು

ಗದಗ :  ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಾವಜನಿಕ ಶಿಕ್ಷಣ ಇಲಾಖೆಯ ಉಪರ್ದೇಶಕ ಎನ್.ಎಚ್. ನಾಗೂರ ನುಡಿದರು.

   ಲಕ್ಷ್ಮೇಶ್ವರ ಸಮೀಪದ ಬಟ್ಟೂರು ಗ್ರಾಮದ ಸಕರ್ಾರಿ ಪ್ರೌಢ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿ ಶಿಕ್ಷಣದ ಮಹತ್ವ ಕಡ್ಡಾಯ ಶಿಕ್ಷಣ, ಪಾಲಕರ ಜವಾಬ್ದಾರಿಗಳು ಶಾಲೆಗಳ ಬಗ್ಗೆ ಸಮುದಾಯದ ಕಾಳಜಿ ಕುರಿತು ಅರಿವು ಮೂಡಿಸಲು ಮುಂದಾಗಬೇಕು. ನಂತರ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಓಣಿಗಳಲ್ಲಿ ಪಾಲಕರನ್ನು ಡಿಡಿಪಿಐ ಭೇಟಿ ಮಾಡಿದರು ಶಿಕ್ಷಣದ ಮಹತ್ವ ಕುರಿತು ಸ್ಥಳೀಯರಿಗೆ ತಿಳಿಹೇಳಿದರು. ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ  ಡಿಡಿಪಿಐ ನಾಗೂರು ಮನವಿ ಮಾಡಿದರು.

    ನಂತರ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಕ್ಕಳು ಮತ್ತು ಪಾಲಕರೊಂದಿಗೆ ಶೃಕ್ಷಣಿಕ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣದ ಸಮಸ್ಯೆ ಕುರಿತು ಚರ್ಚೆ ನಡೆಸಿಕೆಲವು ಸಮಸ್ಯಗಳಿಗೆ ಅಲ್ಲಯೇ ಪರಿಹಾರ ಕಂಡುಕೊಂಡರು. 

    ಸಂವಾದ ಕಾರ್ಯಕ್ರಮದಲ್ಲಿ ಬಟ್ಟೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾಥರ್ಿನಿ ಪವಿತ್ರಾ ಅಂಗಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಹೇಗೆ ಅಭ್ಯಾಸ ಮಾಡಬೇಕು ಎಂದು ಕೇಳಿದರು. ನಂತರ 9ನೇ ತರಗತಿ ವಿದ್ಯಾಥರ್ಿನಿ  ಭೀಮವ್ವ ಸಾವಿರಕುರಿ ಗಣಿತ,ವಿಜ್ಞಾನ, ಸಮಾಜವಿಜ್ಞಾನ, ಹಾಗೂ ಆಂಗ್ಲ ಭಾಷೆಯನ್ನು ಹೇಗೆ ಕಲೆಯಬೇಕು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಏನು ಮಾಡಬೇಕು. ಆ ಪ್ರಶ್ನೆಗಳಿಗೆ ಉತ್ತರಿಸಿದ ಡಿಡಿಪಿಐ ಅವರು, ತರಗತಿಯಲ್ಲಿ ಶಿಕ್ಷಕರು ಬೋಧನೆ ಮಾಡುವಾಗ ಗಮನವಿಟ್ಟು ಪಾಠ ಕೇಳಬೇಕು. ಮನೆಯಲ್ಲಿ ಸರಿಯಾಗಿ ಅಭ್ಯಾಸ ಮಾಡಬೇಕು. ಓದಿನ ವಿಷಯವನ್ನು ಬರೆದು ತೆಗೆಯಬೇಕು ಎಂದು ಉತ್ತರಿಸಿದರು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ, ಶಿಕ್ಷಣ ಇಲ್ಲದೆ ಮಕ್ಕಳ ಭವಿಷ್ಯ ರೂಪುಗೊಳ್ಳದು, ಪಾಲಕರು ಎಷ್ಟೇ ಕಷ್ಟವಾದ್ದರೂ ಮಕ್ಕಳಿಗೆ ವಿದ್ಯೆ ಕೊಡಿಸಬೇಕು ಎಂದು ಎನ್.ಎಚ್. ನಾಗೂರು ಸಲಹೆ ನೀಡಿದರು. 

     ಇದೇ ಸಂದರ್ಭದಲ್ಲಿ ಯು.ಎನ್. ಹೊಳಲಾಪುರ, ಎಫ್.ಎಂ. ಅಂಗಡಿ  ಬಿಇಒ ವಿ.ವಿ. ಸಾಲಿಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ದೇವಕ್ಕ ಲಮಾಣಿ, ಗ್ರಾಮದ ಪಂಚಾಯ್ತಿ ಅಧ್ಯಕ್ಷರು ಸೋಮಶೇಖರಯ್ಯ ಶಿಗ್ಲಿಹಿರೇಮಠ, ಎಚ್.ಎನ್.ಖಾನ್, ಡಿ.ಐ. ಅಸುಂಡಿ, ಯಲ್ಲಪ್ಪಗೌಡ ಹೊಳಲಾಪುರ, ಫಕೀರಪ್ಪ ಹರಿಜನ, ಕಲ್ಲಪ್ಪ ಹಡಪದ, ಜಗದೇಶಗೌಡ ಪಾಟೀಲ, ಎಚ್.ಬಿ. ರಡ್ಡೇರ, ಡಾ. ಜಯಶ್ರೀ ಹೊಸಮನಿ ಇದ್ದರು.